ಬಂಟ್ವಾಳ: ಒಂದೆಡೆ ಸುರಿಯುತ್ತಿದ್ದ ಮಳೆ ಈ ಮಧ್ಯೆ ಆಧಾರ್ ಟೋಕನ್ ಗಾಗಿ ಜನ ಸಾಲಗಟ್ಟಿ ನಿಂತಿರುವ ದೃಶ್ಯ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರಿಗಿರುವ ನೆಮ್ಮದಿ ಕೇಂದ್ರ ಮುಂಭಾಗದಲ್ಲಿ ಕಂಡು ಬಂತು. ಬೆಳಿಗ್ಗೆ ಸುಮಾರು 8.30 ಗಂಟೆಯಿಂದಲೇ ಜನರು ಸಾಲು ನಿಂತಿದ್ದರು. ದಸರಾ ಹಿನ್ನಲೆಯಲ್ಲಿ ನಾಲ್ಕು ದಿನಗಳ ಕಾಲ ಸರಕಾರಿ ರಜೆಯ ಕಾರಣ ಜನರು ಅಧಾರ್ ಕಾರ್ಡಗಾಗಿ ಛಾಯಾಚಿತ್ರ ತೆಗೆಯಲು ಮತ್ತು ಇದಕ್ಕಾಗಿ ಟೋಕನ್ ಪಡೆಯಲು ಹಾಗೆಯೇ ಪಹಣಿ ಪತ್ರ ಮತ್ತಿತರ ದಾಖಲೆ ಪತ್ರಗಳನ್ನು ಪಡೆಯಲು ,ಅರ್ಜಿಸಲ್ಲಿಕೆಗಾಗಿ ಜನರು ಮೈಲುದ್ದಕ್ಕೆ ಸರತಿ ಸಾಲು ನಿಲ್ಲ ಬೇಕಾಯಿತು.ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದರು ಮಹಿಳೆಯರು, ವೃದ್ತ ರು, ಮಗುವನ್ನು ಹಿಡಿದುಕೊಂಡ ತಾಯಂದಿರು ಮಳೆಯಲ್ಲಿ ನೆನೆಯುತ್ತಾ ಸಾಲು ನಿಂತಿದ್ದರು.
ಸುಮಾರು 11.30ರವರೆಗೂ ಸಾಲಿನಲ್ಲಿಯೇ ತೆರಳಿ ತಮ್ಮ ಕೆಲಸ ಮಾಡಿಸಿಕೊಂಡರು. ತಾಲೂಕಿನ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗೆ ಸಂಬಂಧಿಸಿ ಎರಡು ಪ್ರತ್ಯೇಕ ನೆಮ್ಮದಿ ಕೇಂದ್ರಗಳಿದ್ದರೂ ಈಪೈಕಿ ಪಾಣೆಮಂಗಳೂರು ಕೇಂದ್ರದಲ್ಲಿ ನೆಟ್ ವಕ್9 ಸಮಸ್ಯೆಯಿಂದ ಆಧಾರ್ ನ ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ.ಹಾಗೆಯೇ ಆಧಾರ್ ಪ್ರಕ್ರಿಯೆಗೆ ಎರಡೂ ಕೇಂದ್ರದಲ್ಲಿ ಒಂದೊಂದೇ ಕಂಪ್ಯೂಟರ್ ಇರುವುದರಿಂದ ಜನರು ಕೆಲವೊಮ್ಮೆ ಸಂಜೆಯವರೆಗೂ ಸಾಲು ನಿಂತಿರುತ್ತಾರೆ. ಅದಕ್ಕಾಗಿ ಕೇಂದ್ರದ ಸಿಬ್ಬಂದಿಗಳು ಆಧಾರ್ ಮಾಡಿಸಲೆಂದು ಬರುವ ಜನರಿಗೆ ವಿವಿಧ ದಿನಾಂಕ ನಮೂದಿಸಿ ಟೋಕನ್ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಆ ದಿನದಂದು ಕೊಟ್ಟಿರುವ ನಿಗದಿತ ಸಂಖ್ಯೆಗಷ್ಟೆ ಆಧಾರ್ ಪ್ರಕ್ರಿಯೇ ನಡೆಸಲಾಗುತ್ತಿದೆ. ಇಲ್ಲಿನ ಆಧಾರ್ ಕೇಂದ್ರಕ್ಕೆ ಹೆಚ್ಚುವರಿ ಕಂಪ್ಯೂಟರ್,ಸಿಬ್ಬಂದಿಗಳ ನೇಮಕಕ್ಕೆ ಹಲವು ಸಮಯದಿಂದ ಸಾರ್ವಜನಿಕರಿಂದ ಕೂಗು ಕೇಳುತ್ತಿದ್ದರೂ ಸಂಬಂಧಿತರು ಮಾತ್ರ ವ್ಯವಸ್ಥೆ ಕಲ್ಪಿಸಿಲ್ಲ ಎಂಬುದು ಸದ್ಯದ ಸಂಗತಿ.
