ಬಂಟ್ವಾಳ:ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜಯಂತಿಪ್ರಯುಕ್ತಶ್ರೀ.ಕ್ಷೇ.ಧ.ಗ್ರಾ.ಯೋಜನೆ,ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಘಟಕ ಘಟಕ,ರೋಟರಿಕ್ಲಬ್ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ ಮತ್ರು ಮದ್ಯವರ್ಜಿತರ ಅಭಿನಂದನಾ ಸಮಾರಂಭ ಒಕ್ಟೋಬರ್. 8 ರಂದು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ನಡೆಯಲಿದೆ. ಈ ಬಗ್ಗೆ ಮಂಗಳವಾರ ಬಂಟ್ವಾಳ ಪ್ರಸ್ ಕ್ಲಬ್ ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ತಾಲೂಕು ಜನಜಾಗ್ರತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು ಅವರು,ಈ ಸಮಾವೇಶದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಮಧ್ಯವರ್ಜಿತರು ಭಾಗವಹಿಸಲಿದ್ದು, ಅವರಿಗೆ ರೋಟರಿ ಕ್ಲಬ್ ನ ವತಿಯಿಂದ ಹಣ್ಣಿನ ಸಸಿಗಳನ್ನು ವಿತರಿಸಲಾಗುವುದು ಎಂದರು.
ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ 74 ಕೇಂದ್ರಗಳಲ್ಲಿ ಜನಜಾಗ್ರತಿ ಜಾಥ,ವ್ಯಸನಮುಕ್ತರಿಗೆ ಸನ್ಮಾನ,ಹಕ್ಕೊತ್ತಾಯ ಕಾರ್ಯಕ್ರಮ,ಸಮಾವೇಶಗಳನ್ನು ಆಯೋಜಿಸಿ ಸುಮಾರು 10 ಲಕ್ಷ ಜನರಿಗೆ ದುಶ್ಚಟಗಳ ವಿರುದ್ದ ಜಾಗ್ರತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಮದ್ಯದ ತೆರಿಗೆಯಿಂದ ಬರುವಂತ ಲಾಭಕ್ಕಿಂತಲೂ ಸಮಾಜದಲ್ಲಿ ಅಗುವ ನಷ್ಟ ವನ್ನು ಗಮನದಲ್ಲಿಟ್ಟುಕೊಂಡು ಸರಕಾರ ರಾಜ್ಯದಲ್ಲಿ ಪಾನ ನಿಷೇಧವನ್ನು ಜಾರಿಗೊಳಿಸಬೇಕೆಂದು ಈಸಂದರ್ಭದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದ ಅವರು ಮುಂಬರುವ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪಾನನಿಷೇಧದ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಈವರೆಗೆ 45 ಮಧ್ಯವರ್ಜನ ಶಿಬಿರವನ್ನು ನಡೆಸಲಾಗಿದ್ದು, ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಮದ್ಯಮುಕ್ತರಾಗಿದ್ದಾರೆ.ಎಲ್ಲರನ್ನೂ ಮನವೊಲಿಸುವ ಮೂಲಕವೇ ಪರಿವರ್ತನೆಗೊಳಿಸಲಾಗಿದೆ ಎಂದರು.ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದು,ಮಾಣಿಲ ಶ್ರೀ ಧಾಮ ಮೋಹನದಾಸ ಸ್ವಾಮೀಜಿ ಅಶೀರ್ವಚನ ಮಾಡಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್,ನಂದಾವರ ಕ್ಷೇತ್ರದ ವ್ಯವಸ್ಥಾಪನಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ,ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ,ಅತಿಥಿಯಾಗಿ ಭಾಗವಹಿಸಲಿದ್ದಾರೆ.ಜನಜಾಗ್ರತಿ ವೇದಿಕೆಯ ನಿರ್ದೇಶಕ ವಿನ್ಸಂಟ್ ಪಾಯಸ್ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ,ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್,ಕೃಷಿ ಅಧಿಕಾರಿ ನಾರಾಯಣ,ಮೇಲ್ವಿಚಾರಕ ಚಂದ್ರಶೇಖರ್,ರೋಟರಿಕ್ಲಬ್ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ,ಬಸ್ತಿ ಮಾಧವ ಶೆಣೈ ರವರು ಉಪಸ್ಥಿತರಿದ್ದರು.
