ವಿಟ್ಲ: ಕನಕಶ್ರೀ ಮೊಗೇರ ಸಂಘಟನೆ, ಮಹಿಳಾ ಸಂಘಟನೆ ಮತ್ತು ಮೊಗೇರ ವಿದ್ಯಾರ್ಥಿ ಸಂಘಟನೆ ವತಿಯಿಂದ ಕನಸು ನನಸು ಯೋಜನೆಯ ಕನಕಶ್ರೀ ನೆನಪಿನ ಕಾಣಿಕೆಯಾಗಿ ಮನೆಗೊಂದು ವೃಕ್ಷ ಕನಕಶ್ರೀ ಕಲ್ಪವೃಕ್ಷ ವಿತರಣಾ ಕಾರ್ಯಕ್ರಮವು ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ನಡೆಯಿತು.IMG_20170924_103732

ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಕಾವ್ಯಶ್ರೀ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಸಂಜೀವ ಯು, ಜೀವ ವಿಮಾ ನಿಗಮದ ಮೋಹನ ಪದ್ಯಾಣ, ಪ್ರಾಂಸುಪಾಲ ಕಿಶೋರ್ ಕುಮಾರ್, ಸಿಂಡಿಕೇಟ್ ಬ್ಯಾಂಕಿನ ಸರಸ್ವತಿ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಕಾರ್ಯದರ್ಶಿ ಚಂದ್ರಶೇಖರ್ ಯು, ಕನಕಶ್ರೀ ಸಂಘಟನೆ ಕಾರ್ಯದರ್ಶಿ ಅಶೋಕ್ ಕುಮಾರ್ ಒಡಿಯೂರು, ಉಪನ್ಯಾಸಕ ಸೋಮಶೇಖರ್ ಹೆಚ್ ಮತ್ತು ರಮೇಶ್ ಹೊಸತೋಟ ಭಾಗವಹಿಸಿದ್ದರು.
ಸಂಘಟನೆಯ ಅಧ್ಯಕ್ಷ ಸುರೇಶ್ ಪೆರುವಾಯಿಗುತ್ತು ಮತ್ತು ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಪ್ರಮೀಳ ಡಿ ಮಂಜೇಶ್ವರ ಇವರ ನೇತೃತ್ವದಲ್ಲಿ 48 ವಿದ್ಯಾರ್ಥಿ ಕುಟುಂಬಗಳಿಗೆ ಸಸಿಗಳನ್ನು ವಿತರಿಸಲಾಯಿತು. ಸಸಿಗಳನ್ನು ಚೆನ್ನಾಗಿ ಬೆಳೆಸಿದವರಿಗೆ ಕ್ರಮವಾಗಿ ಬಂಗಾರ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಲಾಗುವುದು ಎಂದು ಮೋಹನದಾಸ್ ವಿಟ್ಲ ಘೋಷನೆ ಮಾಡಿದರು. ವಿನೀತ್ ಚೆಲ್ಲಡ್ಕ ಸ್ವಾಗತಿಸಿದರು. ಆಶಿಕ್ ಅಳಿಕೆ ವರದಿ ವಾಚಿಸಿದರು. ಮೋಕ್ಷಿತ್ ಚೆಲ್ಲಡ್ಕ ವಂದಿಸಿದರು. ಅಕ್ಷತ್ ಅಳಿಕೆ ನಿರೂಪಿಇದರು.

By suddi9

Leave a Reply

Your email address will not be published. Required fields are marked *