ವಿಟ್ಲ :ಶ್ರೀ ದೇವತಾ ಸಮಿತಿ ಇದರ 46 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮವನ್ನು ದ ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ ಅರ್ಧಯಕ್ಷತೆ ವಹಿಸಿದ್ದರು.
ಸದಸ್ಯ ರವಿಪ್ರಕಾಶ್, ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ, ದೇಜಪ್ಪ ಪೂಜಾರಿ ನಿಡ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇವತಾ ಸಮಿತಿ ಅಧ್ಯಕ್ಷ ಎಂ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಗೋಕುಲ್ದಾಸ್ ಶೆಣೈ, ಇತರ ಪದಾಧಿಕಾರಿಗಳಾದ ಸುದರ್ಶನ ಪಡಿಯಾರ್, ರಾಘವೇಂದ್ರ ಪೈ, ಸದಾಶಿವ ಆಚಾರ್ಯ, ಪ್ರಭಾಕರ ಆಚಾರ್ಯ, ಮೋನಪ್ಪ ಗೌಡ ಶಿವಾಜಿನಗರ, ಶೀನ ಕಾಶಿಮಠ ಮೊದಲಾದವರು ಉಪಸ್ಥಿತರಿದ್ದರು.
