ವಿಟ್ಲ : ಮಹತೋಬಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ವಿಟ್ಲ ಇಲ್ಲಿ ಕನ್ಯಾ ಮಾಸದ ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತ ಪಂಚಮಿಯ ದಿನ 24-09-2017 ರಂದು ಶ್ರೀದೇವಿ ಸನ್ನಿಧಿಯಲ್ಲಿ ಶ್ರೀ ಚಕ್ರ ಪೂಜೆಯು ವೇದ ಮೂರ್ತಿ ಕಡಂಬು ಪ್ರಸಾದ್ ಬನ್ನಿಂತಾಯರ ಪೌರೋಹಿತ್ಯದಲ್ಲಿ ನಡೆಯಿತು. ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು, ಕೃಷಯ್ಯ ಕೆ ವಿಟ್ಲ ಅರಮನೆ, ಎಲ್ ಎನ್ ಕೂಡೂರು, ವೇದಮೂರ್ತಿ ಕುಂಟುಕುಡೇಲು ರಘುರಾಮ ತಂತ್ರಿ ಮುಂತಾದವರು ಉಪಸ್ಥಿತರಿದ್ದರು.

