ಉಡುಪಿ:- ದಾನ ಮಾಡಲುಉತ್ತಮ ಮನಸ್ಸಿದ್ದರೆ ಸಾಕು ಹಣ ಬೇಕಾಗಿಲ್ಲ ಈ ನಿಟ್ಟಿನಲ್ಲಿ ಅಷ್ಟಮಿ ದಿನ ವಿಶೇಷವಾದವೇಷ ಧರಿಸಿ ಅದರಿಂದ ಬಂದ ಹಣವನ್ನು ಈ ರೀತಿಯಲ್ಲಿದಾನ ನೀಡುವುದು ಅಪೂರ್ವವಾದ ಸೇವೆ ಎಂದು ಖ್ಯಾತಛಾಯಾಚಿತ್ರಗಾರ ಗುರುದತ್ ಕಾಮತ್ ಹೇಳಿದರು
ಅವರು ಸೆ.22 ರಂದು ಉಡುಪಿ ಕೋರಂಗ್ರಪಾಡಿಯಲ್ಲಿರುವ ಪಿಲ್ವಾರಿ ವೃದ್ದಾಶ್ರಮದಲ್ಲಿ ನಡೆದರಾಮಾಂಜಿಯವರು ವೇಷ ಹಾಕಿ ಸಂಗ್ರಹಿಸಿದ ಹಣವನ್ನು ಆಶ್ರಮಕ್ಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇವೆಯಲ್ಲಿಯಾವುದೇ ಫಲಾಪೇಕ್ಷೆಯಿಲ್ಲದೆ ನಮ್ಮ ಖುಷಿಗಾಗಿ ಮಾಡಿದಾಗ ಅದರಿಂದ ನಮಗೆ ಯಾವುದೇ ಬೇಸರವಾಗುದಿಲ್ಲ ಎಂದ ಅವರು,ನಮ್ಮದೇಶದಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿರುದಕ್ಕೆ ಆತಂಕ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು,ನಮ್ಮ ಭೂಮಿಯ ಸ್ಥಾಪಕರಲ್ಲಿ ಒಬ್ಬರಾದಗಣಪತಿ ಎಂ.ಎಂ, ವೈದ್ಯರಾದ ಡಾ|| ಕೀರ್ತಿಪಾಲನ್,ಆಶ್ರಮದ ಮೇಲ್ವಿಚಾರಕ ಕುಮಾರ್ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಗಿಡ ನೆಟ್ಟು ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ರಾಘವೇಂದ್ರ ಪ್ರಭುಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

