ಬಂಟ್ವಾಳ:: ಯೋಗ ಕೇವಲ ಶಾರೀರಿಕ ಶಿಕ್ಷಣ ಮಾತ್ರವಲ್ಲ. ಭೌದ್ಧಿಕ, ಆಧ್ಯಾತ್ಮಿಕ ಹಾಗೂ ಮಾನಸಿಕ ವಿಕಾಸವೂ ಪ್ರಾಣಾಯಾಮದಿಂದ ಸಾಧ್ಯ. ನಿತ್ಯಜೀವನದಲ್ಲಿಇದರ ಅಳವಡಿಕೆಯಿಂದ ಮಾನವಕುಲದ ಅನೇಕ ರೋಗಗಳನ್ನು ದೂರವಿಡಬಹುದು.ಜಗವೇತಲೆಬಾಗಿದಯೋಗದ ಪ್ರವರ್ತಕರಾದ ಪತಂಜಲಿ ಮುನಿಗಳಿಗೆ ನಾವೆಲ್ಲರೂ ಚಿರಋಣಿಗಳಾಗಿರಲೇಬೇಕು.ಎಂದುಉದ್ಯಮಿ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಶ್ರೀಕರ ಪ್ರಭು ಅಭಿಪ್ರಾಯಪಟ್ಟರು.IMG_4438
ಇವರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‍ಕಾಲೇಜು ಪುರುಷರ ಮತ್ತು ಮಹಿಳೆಯರ ಯೋಗಾಸನ ಸ್ಪರ್ಧೆ 2017-18 ಇದರ ಸಮರೋಪ ಸಮಾರಂಭದಲ್ಲಿಅತಿಥಿಯಾಗಿ ಆಗಮಿಸಿ ಯೋಗವು ಕೇವಲ ಸ್ಫರ್ಧೆಗಾಗಿಇರದೆಜೀವನ ಪೂರ್ತಿ ಅಳವಡಿಸಿಕೊಳ್ಳಿ.ಇದರಿಂದಲೇಉನ್ನತಿ ಸಾಧ್ಯ.ಕಣ್ಣಿನಆರೋಗ್ಯ, ಹೃದಯ, ಹೊಟ್ಟೆ, ಸ್ನಾಯು, ಜೀರ್ಣಾಂಗ ವ್ಯವಸ್ಥೆಗಳು ಕೇವಲ ಯೋಗದಿಂದಲೇ ಸುಗಮವಾಗಲು ಸಾಧ್ಯಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಮಾಜಿ ಶಾಸಕ,ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ ಸದಸ್ಯರಾದಕೆ.ಪದ್ಮನಾಭಕೊಟ್ಟಾರಿ ವಹಿಸಿದ್ದರು. ವೇದಿಕೆಯಲ್ಲಿನ್ಯಾಯವಾದಿ ಆಶಾಪ್ರಸಾದ್‍ರೈ, ಚಂದ್ರಶೇಖರ ಸಾಲ್ಯಾನ್ ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಡಾ|ಪ್ರಸನ್ನ ಬಿ.ಕೆ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕಶಿಕ್ಷಣ ನಿರ್ದೇಶಕರು, ಪದವಿ ಪ್ರಾಚಾರ್ಯಕೃಷ್ಣಪ್ರಸಾದ, ಪದವಿದೈಹಿಕ ಶಿಕ್ಷಣ ನಿರ್ದೇಶಕಅರವಿಂದ ಪ್ರಸಾದ್‍ಉಪಸ್ಥಿತರಿದ್ದರು.ಯೋಗಾಸನ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದಿರೆ, ದ್ವಿತೀಯ ಮಂಗಳೂರು ವಿಶ್ವವಿದ್ಯಾನಿಲಯಕ್ಯಾಂಪಸ್‍ ಕೊಣಾಜೆ, ತೃತೀಯ ಧವಳ ಕಾಲೇಜು ಮೂಡಬಿದಿರೆ ಹಾಗೂ ಚತುರ್ಥ ಶ್ರೀರಾಮ ಪದವಿ ಕಾಲೇಜುಕಲ್ಲಡ್ಕ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜುಉಜಿರೆ, ದ್ವಿತೀಯ ಮಂಗಳೂರು ವಿಶ್ವವಿದ್ಯಾನಿಲಯಕ್ಯಾಂಪಸ್‍ಕೊಣಾಜೆ, ತೃತೀಯಎಸ್.ಆರ್.ಎಮ್.ಎನ್. ಸರಕಾರಿ ಪ್ರಥಮ ದರ್ಜೆಕಾಲೇಜು ಬಾರ್ಕೂರು, ಚತುರ್ಥ ಸಂತ ಆಗ್ನೇಸ್‍ಕಾಲೇಜು ಮಂಗಳೂರು ಪಡೆದುಕೊಂಡಿತು.ಕಾರ್ಯಕ್ರಮವನ್ನುಉಪನ್ಯಾಸಕಿ ಸುಕನ್ಯಾ ನಿರೂಪಿಸಿ, ಗುರುಪ್ರಸಾದ್ ಸ್ವಾಗತಿಸಿ, ಹರೀಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *