ಬಂಟ್ವಾಳ:ಸಮಾಜ ವಿದ್ರೋಹಿ ಕ್ರತ್ಯದಲ್ಲಿ ಭಾಗಿಯಾಗಿರುವ ಪಿಎಫ್ಐ,ಎಸ್. ಡಿ. ಪಿ. ‌ಐ‌ ಹಾಗೂ ಕೆಎಫ್ ಡಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು,ಹಿಂದೂ ಯುವಕರ ಹತ್ಯೆ,ಹಲ್ಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು,ಸಮಾಜಘಾತುಕ ಸಂಘಟನೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ಬಿ.ರಮಾನಾಥ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ , ಯುವಮೋರ್ಚಾ ಹಾಗೂ ಸಂಘ ಪರಿವಾರ ಸಂಘಟನೆಯ ಆಶ್ರಯದಲ್ಲಿ ಬಂಟ್ವಾಳ ಪುರಸಭೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

6

20170904_101405

ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಕಳೆದ ೨ ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ,ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪಿಎಫ್ ಐ,ಎಸ್ ಡಿ ಪಿ ಐ ,ಕೆಎಫ್ ಡಿ ಸಂಘಟನೆ ನೇರವಾಗಿ ಭಾಗಿಯಾಗಿರುವುದು ಸಾಭೀತಾಗಿದೆ.ಈ ಸಂಘಟನೆಯು ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು,ಇದರ ಪದಾಧಿಕಾರಿಗಳೇ ಈ ಸಂಘಟನೆಯಲ್ಲೂ ಪದಾಧಿಕಾರಿಯಾಗಿರುವುದು ಕಾನೂನಿಗೆ ಮಾಡಿರುವ ಅಣಕದಂತಿದೆ ಎಂದು ಟೀಕಿಸಿದರು. ಸೆ.೭ ರಂದು ಪ್ರತಿಭಟನಾರ್ಥವಾಗಿ ನಡೆಯಲಿರುವ ಬೈಕ್ ರ್ರಾಲಿ ಯನ್ನು ಹತ್ತಿಕ್ಕಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

20170904_102103

7ಪ್ರತಿಭಟನಾ ಸಭೆಯ ಬಳಿಕ ರಾಜ್ಯಪಾಲರಿಗೆ ಪುರಸಭಾ ಮುಖ್ಯಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು. ಅಲ್ಪಸಂಖ್ಯಾತ ಮೋರ್ಚಾ ಮುಖಂಡ ರೋನಾಲ್ಡ್ ಡಿಸೋಜ ಮನವಿ ವಾಚಿಸಿದರು. ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್, ದೇವದಾಸ ಶೆಟ್ಟಿ, ರಾಮದಾಸ್ ಬಂಟ್ವಾಳ, ಎ. ಗೋವಿಂದ ಪ್ರಭು, ದಿನೇಶ್ ಭಂಡಾರಿ, ಭಾಸ್ಕರ್ ಟೈಲರ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ರಾಜರಾಮ ನಾಯಕ್, ಗೋಪಾಲ ಸುವರ್ಣ, ಸುಗುಣ ಕಿಣಿ, ವಿದ್ಯಾವತಿ, ರವಿರಾಜ್ ಬಿ.ಸಿ.ರೋಡ್, ಖಲೀಲ್ ಅಹ್ಮದ್ ಮತ್ತಿತ್ತರು ನೇತೃತ್ವ ವಹಿಸಿದರು.

By suddi9

Leave a Reply

Your email address will not be published. Required fields are marked *