ಬಂಟ್ವಾಳ: ಜಕ್ರಿಬೆಟ್ಟು ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪ್ರಯುಕ್ತ ಶ್ರೀ ಸಾಯಿ ಫ್ರೆಂಡ್ಸ್ ಬೈಪಾಸ್ ಬಂಟ್ವಾಳ ಇವರ ವತಿಯಿಂದ ಬೈಪಾಸ್ನಲ್ಲಿ ನಡೆದ 7ನೇ ವರ್ಷದ ಸಾಂಸ್ಖøತಿಕ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಹಿರಿಯ ಕಲಾವಿದ ರಮಾ ಬಿಸಿರೋಡು ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕವಾಗಿ ಸಾಕಷ್ಟು ತೊಂದರೆಗೊಳಗಾಗಿರುವ ಪಲ್ಲಮಜಲಿನ ಗೀತಾ ಮತ್ತು ಕೀರ್ತನ್ ಆಚಾರ್ಯ ಅವರಿಗೆ ಚಿಕಿತ್ಸೆಯ ನೆರವಿಗಾಗಿ ತಲಾ ರೂ 10ಸಾವಿರ ನಗದು ಮತ್ತು ಬಡ ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ಬೆದ್ರಗುಡ್ಡೆಯ ತ್ರಿಶಾ ಮತ್ತು ದಡ್ಡಲುಕಾಡಿನ ಜಸ್ಮಿತಾ ಅವರಿಗೆ ರೂ 10ಸಾವಿರದ ಕಲ್ಪವೃಕ್ಷ ಠೇವಣಿ ಪತ್ರವನ್ನು ನೀಡಲಾಯಿತು. ಈ ಸಂದರ್ಭ ಶ್ರೀ ಸಾಯಿ ಫ್ರೆಂಡ್ಸ್ನ ಸದಸ್ಯರು ಹಾಜರಿದ್ದರು.
