ಕೈಕಂಬಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಅ.29 ಮಂಗಳವಾರ ಮುಂಜಾನೆ 4 ಗಂಟೆಗೆ ವಾಸ್ತುಶಿಲ್ಪಿ ಮಹೇಶ್ ಮಣಿಯಂಗಳ್ ನೇತೃತ್ವದಲ್ಲಿ ನೇರವೇರಿತು.
ಕ್ಷೇತ್ರದ ತಂತ್ರಿಗಳಾದ ವೆಂಕಟೇಶ್ ತಂತ್ರಿ ನೇತೃತ್ವದಲ್ಲಿ ದೇವಳದ ಅರ್ಚಕರಾದ ಪೊಳಲಿ ಮಾಧವ ಭಟ್, ನಾರಾಯಣ ಭಟ್, ರಾಮ್‍ಭಟ್, ದೋಟ ಪರಮೇಶ್ವರ್ ಭಟ್, ಪರ್ದಕಂಡ ಮಾಧವ ಭಟ್, ಪೊಳಲಿ ಪದ್ಮನಾಭ ಭಟ್ ವಿಷ್ಣುಮೂರ್ತಿ ನಟ್ಟೋಜ, ಪೂಜೆ ನೇರವೇರಿಸಿದರು.
ಜಿರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಹಾಗೂ ಮೋಕ್ತೇಸರರಾದ ಉಳಿಪಾಡಿಗುತ್ತು ತಾರನಾಥ ಆಳ್ವ, ಮೊಕೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಚೇರಸೂರ್ಯನಾರಾಯಣ ರಾವ್, ಮಾಧವ ಮಯ್ಯ, ಜಿಣೋದ್ಧಾರ ಕಮಿಟಿ ಸದಸ್ಯರು ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಅರುಣ್ ಆಳ್ವ, ಸುಭ್ರಾಯ ಕಾರಂತ್, ಚಂದ್ರಶೇಖರ್ ಭಂಡಾರಿ, ಕೃಷ್ಣರಾಜ್ ಮಾರ್ಲ, ಕಟ್ಟಡ ಸಮಿತಿ ಸದಸ್ಯ ಗಿರಿಧರ್ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್,ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
