ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಶ್ರೀ ಶಾರದಾ ಪ್ರೊಸೆಸರ್ಸ್ ಉಕ್ಕುಡ ಇದರ ಮಾಲಕ ಸತ್ಯನಾರಾಯಣ ಭಟ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಹಿರಿಯ ಸ್ವಯಂ ಸೇವಕ ತಿಮ್ಮಪ್ಪ ನಾಯ್ಕ ಜೋಗಿಮಠ ಧ್ವಜಾರೋಹಣ ನೆರವೇರಿಸಿದರು. ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು, ಸಮಿತಿ ಗೌರವಾಧ್ಯಕ್ಷ ರಾಮದಾಸ ಶೆಣೈ, ಅಧ್ಯಕ್ಷ ರವಿಪ್ರಕಾಶ್ ಎಸ್, ಕಾರ್ಯದರ್ಶಿ ಶಶಿಕಾಂತ ವಿಟ್ಲ, ಕೋಶಾಧಿಕಾರಿ ಗೋವರ್ಧನ ಕುಮಾರ್ ಐ, ಮಾಜಿ ಅಧ್ಯಕ್ಷರುಗಳಾದ ಅರುಣ್ ಎಂ ಮತ್ತು ಮೋನಪ್ಪ ಗೌಡ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
