ವಾಮಂಜೂರು: ದೇಶದ 71ನೇ ಸ್ವಾತಂತ್ರ್ಯ ಸಂಭ್ರಮವನ್ನುಇಲ್ಲಿನ ಸೈಂಟ್‍ರೈಮಂಡ್ಸ್ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸೈಂಟ್‍ರೈಮಂಡ್ಸ್ ಪದವಿ ಪೂರ್ವ, ಆಂಗ್ಲಮಾಧ್ಯಮ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿಕನ್ನಡ ಮಾಧ್ಯಮಪ್ರೌಢಶಾಲಾಕ್ರೀಡಾಂಗಣದಲ್ಲಿಧ್ವಜರೋಹಣಗೈಯಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಖ್ಯಾತ ಉದ್ಯಮಿ ಶ್ರೀ ರೋಯ್‍ ಕ್ಯಾಸ್ತಲಿನೋ ಮಾತನಾಡಿ ದೇಶಕ್ಕಾಗಿ ಪ್ರಾಣ ಬಲಿದಾನಗೈದ ಮಹನೀಯರನ್ನು ಕೊಂಡಾಡಿದರು. ದೇಶದ ಐಕ್ಯತೆ, ಸಮಗ್ರತೆಗಾಗಿ ಒಂದುಗೂಡಿ ಶ್ರಮಿಸಬೇಕೆಂದುಕರೆಯಿತ್ತರು.SONY DSC

ತದನಂತರ ಪದವಿಪೂರ್ವ ವಿದ್ಯಾರ್ಥಿಗಳಿಂದ ಕಾಲೇಜು ಸಭಾಭವನದಲ್ಲಿರಾಷ್ಟ್ರೀಯ ಭಾವೈಕ್ಯವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕುಮಾರಿ ಚೈತ್ರಾ ಸ್ವಾತಂತ್ರ್ಯೋತ್ಸವ ಸಂದೇಶ ಭಾಷಣವಿತ್ತರು. ಪ್ರಾಂಶುಪಾಲರಾದ ಭಗಿನಿ ಸಾಧನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಿ ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *