ಮಂಗಳೂರು ನಗರದಲ್ಲಿ 2012 ರಲ್ಲಿ ತಲ್ಲಣ ಸೃಷ್ಟಿಸಿದ್ದ ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್ ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಆರೋಪ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ತಲಾ 4 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿ„ಸಿ ಗುರುವಾರ ತೀರ್ಪು ನೀಡಿದೆ.
ಪ್ರಮುಖ ಆರೋಪಿಯಾಗಿದ್ದ ಉಳ್ಳಾಲ ಕೆ.ಸಿ.ರೋಡ್‍ನ ಅಕ್ಕರಕೆರೆ ನಿವಾಸಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ (33) ಹಾಗೂ ಎರಡನೇ ಆರೋಪಿ ಸುರತ್ಕಲ್ ಇಡ್ಯಾ ಕಳರಿಯಾ ಮಸೀದಿ ಬಳಿಯ ನಿವಾಸಿ ಅಬ್ದುಲ್ ಬಶೀರ್ (31) ಶಿಕ್ಷೆಗೊಳಗಾದ ಅಪರಾ„ಗಳು. ಪ್ರಕರಣದಲ್ಲಿ 7 ಮಂದಿ ಆರೋಪಿಗಳಿದ್ದು, ಉಳಿದ ಐದು ಮಂದಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್ ಅತ್ತಾವರದಲ್ಲಿ ಅಕಾಡೆಮಿಯ ಕಚೇರಿಯಲ್ಲಿದ್ದ ಸಂದರ್ಭ 2012 ಮಾರ್ಚ್ 15 ರಂದು ಮಧ್ಯಾಹ್ನ 1.15 ರ ವೇಳೆಗೆ ದಾಳಿ ನಡೆದಿತ್ತು. ಶಿಕ್ಷೆಗೊಳಗಾದ ಅಪರಾ„ಗಳು ಮೂರನೇ ಆರೋಪಿ ಅಬ್ದುಲ್ ಸಲೀಂ ಹಾಗೂ ನಾಲ್ಕನೇ ಆರೋಪಿಯಾಗಿದ್ದ ಹಮೀದ್ ಅವರ ಜತೆ ಮಾರಕಾಯುಧಗಳೊಂದಿಗೆ ರಹೀಂ ಅವರ ಛೇಂಬರ್‍ಗೆ ಪ್ರವೇಶಿಸಿ ತಲವಾರ್‍ನಿಂದ ಕಡಿದು ಗಂಭೀರ ಸ್ವರೂಪದ ಗಾಯ ಉಂಟು ಮಾಡಿ ತಾವು ಬಂದಿದ್ದ ಬೈಕ್‍ಗಳಲ್ಲಿ ಪರಾರಿಯಾಗಿದ್ದರು. ಪಾಂಡೇಶ್ವರ ಠಾಣೆಯ ಆಗಿನ ಇನ್‍ಸ್ಪೆಕ್ಟರ್, ಪ್ರಸ್ತುತ ಸಂಚಾರ ವಿಭಾಗದ ಎಸಿಪಿ ತಿಲಕ್‍ಚಂದ್ರ ಅವರು ಆರೋಪಿಗಳ ವಿರುದ್ಧ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
19 ಸಾಕ್ಷಿ ವಿಚಾರಣೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ„ೀಶರಾಗಿರುವ ಉಮಾ ಎಂ.ಜಿ. ಅವರು ಕೆಲವು ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು. ಬಳಿಕ ಹಾಲಿ ನ್ಯಾಯಾ„ೀಶರಾದ ಕೆ.ಎಸ್.ಬೀಳಗಿ ಅವರು ಸಾಕ್ಷಿ ವಿಚಾರಣೆ ಮುಂದುವರಿಸಿ ಇತ್ತಂಡಗಳ ವಾದ ಆಲಿಸಿ ಇಬ್ಬರು ಅಪರಾ„ಗಳಿಗೆ ಐಪಿಸಿ ಸೆಕ್ಷನ್ 307 ರ ಪ್ರಕಾರ 4 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿ„ಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ ವಿ„ಸಿದ್ದಾರೆ.
ಗಾಯಾಳುವನ್ನು ಪರೀಕ್ಷಿಸಿದ ವೈದ್ಯರಾದ ಡಾ.ಮಹಾಬಲ ಶೆಟ್ಟಿ, ವಶಪಡಿಸಿಕೊಂಡ ವಸ್ತುಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ವರದಿ ನೀಡಿದ ಡಾ.ಗೀತಾಲಕ್ಷ್ಮಿ ಪಿ., ಜಿಲ್ಲಾ ಕಾರಾಗೃಹದಲ್ಲಿ ಆರೋಪಿಗಳ ಗುರುತು ಪತ್ತೆ ಮಾಡುವ ಕವಾಯತು ನಡೆಸಿದ ಅಂದಿನ ತಾಲೂಕು ದಂಡಾ„ಕಾರಿ ರವಿಚಂದ್ರ ನಾಯಕ್ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.
ಐಪಿಸಿ ಸೆಕ್ಷನ್ 326 ರ ಪ್ರಕಾರ ಇಬ್ಬರು ಅಪರಾ„ಗಳಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿ„ಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳು ಸಾದಾ ಶಿಕ್ಷೆ ವಿ„ಸಿದ್ದಾರೆ. ದಂಡದ ಮೊತ್ತದಲ್ಲಿ 1.80 ಲಕ್ಷ ರೂ. ಪರಿಹಾರವಾಗಿ ಗಾಯಾಳು ರಹೀಂ ಉಚ್ಚಿಲ್‍ಗೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ ಗಾಯಾಳು ಕಾನೂನು ಸೇವಾ ಪ್ರಾ„ಕಾರದಿಂದಲೂ ಪರಿಹಾರ ಮೊತ್ತವನ್ನು ಅರ್ಹರಿದ್ದರೆ ಪಡೆಯಬಹುದು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

By suddi9

Leave a Reply

Your email address will not be published. Required fields are marked *