ಬಂಟ್ವಾಳ: ಟಿಪ್ಪು ಸುಲ್ತಾನ್ ಫೌಂಡೇಶನ್ ಕಲಾಯಿ ವತಿಯಿಂದ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾಗಿ ಅಶ್ರಫ್ ಕಲಾಯಿರವರ ಅನುಸ್ಮರಣೆ, ತಹ್ಲೀಲ್ ಸಮರ್ಪಣೆ ಹಾಗೂ ಸ್ಮರಣಾರ್ಥವಾಗಿ ನಿರ್ಮಿಸಿರುವ ಅಭಿವೃದ್ಧಿ ಕೆಲಸಗಳ ಉದ್ಘಾಟನೆ ಕಾರ್ಯಕ್ರಮ ಜುಲೈ 30ರಂದು (ಇಂದು) ಕಲಾಯಿಯಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಯ ಬಳಿಕ ಅಶ್ರಫ್ ಕಲಾಯಿ ಸ್ಮರಣಾರ್ಥವಾಗಿ ನಿರ್ಮಿಸಿರುವ ಸಾರ್ವಜನಿಕ ಬಸ್ ತಂಗುದಾನ, ಕುಡಿಯುವ ನೀರು, ಹೈಮಾಸ್ಟ್ ದೀಪ ಹಾಗೂ ಮಸೀದಿಯ ಕೊಳ (ಹೌಲ್) ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮದರಸದ ಪ್ರತಿಭಾವನಿತ ವಿದ್ಯಾರ್ಥಿಗಳಿಗೆ ಸನ್ಮಾನ, ಬೀಳ್ಕೊಡುಗೆ ಸಾಮಾರಂಭ ನಡೆಯಲಿದೆ. ಲುಹರ್ ನಮಾಝ್ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನದ ನಂತರ ಅನ್ನಸಂತರ್ಪನೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ, ಎಸ್.ಬಿ.ದಾರಿಮಿ, ಅಝೀಝ್ ದಾರಿಮಿ, ಖಾಸಿಂ ಉಸ್ತಾದ್ ಸಹಿತ ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಟಿಪ್ಪು ಸುಲ್ತಾನ್ ಫೌಂಡೇಶನ್ ಕಲಾಯಿ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *