ವಿಟ್ಲ:  ಶಾಲಾ ಮಂತ್ರಿಮಂಡಲ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು  ಶುಕ್ರವಾರ   ಜರುಗಿತು.   ವಿದ್ಯಾರ್ಥಿನಿಯರಾದ ಅನೂಷಾ ಮತ್ತು ಬಳಗದ ಪ್ರಾರ್ಥನೆಯೊಂದಿಗೆ  ನೆರವೇರಿತು. ಉದ್ಯಮಿ ಶ್ರೀಯುತ ರಾಧಾಕೃಷ್ಣ ನಾಯಕ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.SHV_7273

ಕಾರ್ಯಕ್ರಮದ ಅಧ್ಯಕ್ಷರಾದ  ಕ.ಶಿ ವಿಶ್ವನಾಥ ಇವರು ಮಾತನಾಡುತ್ತಾ “ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು ಕನ್ನಡತನವನ್ನು ಉಳಿಸಿಕೊಳ್ಳಬೇಕೆಂದು ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಕ್ಕಾಗಿ ಶುಭಹಾರೈಸಿದರು”.    ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ  ಯಶವಂತ ವಿಟ್ಲ ಮತ್ತು ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಆಯ್ಕೆಯಾದ ಪದಾಧಿಕಾರಿಗಳಿಗೆ ಹಿರಿಯ ಸಹಶಿಕ್ಷಕರಾದ ಸಿ.ಹೆಚ್ ಸುಬ್ರಹ್ಮಣ್ಯ ಭಟ್ ಇವರು ಪ್ರತಿಜ್ಞಾವಿಧಿ ಬೋಧಿಸಿದರು.ವಿದ್ಯಾರ್ಥಿನಿಯರಿಂದ ಸಮೂಹಗಾನ ನಡೆಯಿತು. ವಿದ್ಯಾರ್ಥಿನಿಯರಾದ ಮುಫೀದಾ ಬಾನು ವಂದನಾರ್ಪಣೆಗೈದು, ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *