ಉಡುಪಿ: ಬಿಯಿಂಗ್ ಸೋಷಿಯಲ್ ಉಡುಪಿ ಇದರ ವತಿಯಿಂದ ಜುಲ್ಯೆ.22 ರಂದು ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಸಾಧಕರ ಹೆಜ್ಜೆ ಗುರುತು ಕಾರ್ಯಕ್ರಮದಲ್ಲಿ ವೃಕ್ಷ ಮಾತೆ ಸಾಲು ಮರದ ತಿಮಕ್ಕರವರನ್ನು ಎಂ.ಜಿ.ಎಂ ಕಾಲೇಜು ಮತ್ತು ಬಿಯಿಂಗ್ ಸೋಷಿಯಲ್ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್,ತ್ರಿಷಾ ಕ್ಲಾಸಸ್ ನ ಗೋಪಾಲಕೃಷ್ಣ ಭಟ್,ಮಂಗಳೂರು ವಿ.ವಿ ಸೆನೆಟ್ ಸದಸ್ಯ ಅಮೃತ್ ಶೆಣ್ಯೆ,ಅವಿನಾಶ್ ಕಾಮತ್,ಅಪ್ನಾ ಹಾಲಿಡೆಸ್ ನಾಗರಾಜ ಹೆಬ್ಬಾರ್,ರವಿರಾಜ್ ಹೆಚ್.ಪಿ,ಗುರುರಾಜ್ ಸನಿಲ್‍ಶ್ರೀಕಾಂತ್ ಶೆಟ್ಟಿ,,ಸಾಹಿತಿ ಮುರಳೀಧರ ಉಪಾದ್ಯ ಹಿರಿಯಡಕ,ತಿಮಕ್ಕರವರ ಸಾಕು ಮಗ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.
