ಮಂಗಳೂರು : ಬೆದ್ರ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಪತ್ರಕರ್ತ ರಘು ಶೆಟ್ಟಿ ನಿರ್ದೇಶನದ ಅರ್ಜುನ್ ವೆಡ್ಸ್ ಅಮೃತಾ ಚಲನಚಿತ್ರವು ಜುಲೈ 21ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.ಮಂಗಳೂರಿನಲ್ಲಿ ಜ್ಯೊತಿ, ಸಿನಿಪೋಲಿಸ್ ,ಬಿಗ್ ಸಿನೆಮಾಸ್ ಕಾರ್ಕಳದ ರಾಧಿಕಾ ,ಪ್ಲಾನೆಟ್ ಬೆಳ್ತಂಗಡಿಯ ಭಾರತ್ ,ಮೂಡಬಿದ್ರೆಯ ಅಮರಶ್ರಿ ಪುತ್ತೂರಿನ ಅರುಣಾ ಸುಳ್ಯದ ಸಂತೋಷ್ ಸುರತ್ಕಲ್ ನಟರಾಜ್ ಹಾಗೂ ಉಡುಪಿಯಲ್ಲಿ ಚಿತ್ರ ಏಕಕಾಲದಲ್ಲಿ ತೆರೆಕಾಣಲಿದೆ ಎಂಧು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಹಲವು ಮುಖ್ಯನಟರು ಅಭಿನಯಿಸಿದ್ದಾರೆ.ಆದರೆ ಕುಸಲ್ದರಸೆ ನವೀನ್ ಡಿ ಪಡೀಲ್ರ ಸುತ್ತ ಕಥೆ ತಿರುಗುತ್ತಿರುವುದು ಸಿನೆಮಾದ ಹೈಲೈಟ್. ಅರ್ಜುನ್ ವೆಡ್ಸ್ ಅಮೃತಾ ಚಿತ್ರವು ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು ಆಕ್ಷನ್ ಇಲ್ಲದ ಲವ್ ಸ್ಟೋರಿಯಾಗಿದ್ದು ಸೆಂಟಿಮೆಂಟ್ ಹಾಗೂ ಹಾಸ್ಯ ಮಿಶ್ರಣದಿಂದ ಕೂಡಿದೆ.ಸುಮಾ ಎನ್ ಎಲ್ ಶಾಸ್ತ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ .ಒಟ್ಟಿನ್ನಲ್ಲಿ ಚಿತ್ರವು ಸಿನಿಪ್ರಿಯರ ಮನಸೆಳೆಯುವುದರಲ್ಲಿ ಸಂದೇಹವಿಲ್ಲ ಎಂದು ರಘು ಶೆಟ್ಟಿ ತಿಳಿಸಿದ್ದಾರೆ.
