ಎಲ್ಲಿ ನೋಡಿದರು ಹಚ್ಚ ಹಸುರಿನ ಸಿರಿ .ಜೊತೆಯಲ್ಲಿ ದೇವಾಲಯಗಳ ಸಾಲು .ಹೆಜ್ಜೆಗೊಂದು ಎಂಬಂತೆ ಗುಡಿಗಳು. ಇವೆಲ್ಲಾ ಎಲ್ಲಿವೆ ಎಂದು ಚಿಂತಿಸುತ್ತಿರುವಿರಾ? ಹಾಗಾದರೆ ಕೇಳಿ …. ನಾನಿಂದು ಮಾತಾನಾಡಹೊರಟಿರುವುದು ಗದ್ದಲದ ಗೂಡಾಗಿರುವ ಕರ್ನಾಟಕದ ಬಗೆಯಲ್ಲ ಬದಲಾಗಿ ಕರ್ನಾಟಕದ ಮಗ್ಗುಲಲ್ಲೆ ಇರುವ ಕೇರಳ ಎಂಬ ಪುಟ್ಟ ರಾಜ್ಯದ ಬಗ್ಗೆ..RashtriyaSwayamsevakSangh
ಕೇರಳ ಹೆಸರೇನೋ ಚೆನ್ನಾಗಿದೆ ಆದರೆ ಏನು ಮಾಡೋದು ಕೇರಳ ಎಂಬ ರಾಜ್ಯ ಕೇವಲ ಹೆಸರಿಗಷ್ಟೇ ಚಂದ ಎಂದು ಹೇಳಬೇಕಷ್ಟೇ. ಯಾಕೆ ಅಂತೀರಾ? ಮತ್ತೇನು ಹೇಳೋದು ಕೆಂಪು ರಕ್ಕಸರ ಅಟ್ಟಹಾಸದಿಂದ ನಲುಗಿ ಹೋಗಿರುವ ಆ ರಾಜ್ಯಕ್ಕೆ ಮತ್ತೇನು ಹೇಳಬೇಕೋ ನನಗೆ ತಿಳಿಯದಾಗಿದೆ.ಮೂಲತಃ ನಾನೂ ಒಬ್ಬ ಕೇರಳೀಗನೇ.ಆದರೂ ನನಗೆ ಕೇರಳದ ಬಗ್ಗೆ ಅಷ್ಟಕ್ಕಷ್ಟೇ. ನನ್ನ ವಿರೋಧ ಯಾಕೆ ಅನ್ನೋದಕ್ಕೂ ಮೊದಲು ನಾನು ಘಟನೆಗಳನ್ನು ನೆನಪಿಸುತ್ತಿದ್ದೇನೆ ನೋಡಿ.
ಅದು ಮುಂಜಾವಿನ ಸಮಯ. ವಿದ್ಯಾರ್ಥಿಗಳೆಲ್ಲಾ ಶಾಲೆಯ ಪ್ರಾಂಗಣವನ್ನು ಅದಾಗಲೇ ಪ್ರವೇಶಿಸಿಯಾಗಿತ್ತು. ಜೊತೆಗೆ ಸುರೇಂದ್ರ ಮಾಷ್ಟ್ರು ಸಹಾ ಶಾಲೆಗೆ ಮಕ್ಕಳಿಗೆ ಪಾಠ ಹೇಳಿಕೊಡಣ ಅಂತ ಬಂದಿದ್ರು.ಬೆಳಗಿನ ಪ್ರಾರ್ಥನೆ ಮುಗಿಸಿ ಮಾಷ್ಟ್ರು 3ನೆ ತರಗತಿಗೆ ಹೋಗಿದ್ರು. ಅಷ್ಟೇ.ಎಲ್ಲಿಂದಲೋ ಬಂದ ಒಂದು ತಂಡ ಅದಾಗಲೇ ಮಾಸ್ತರರ ಮೇಲೆರಗಿ ಅವರ ಕೈಕಾಲುಗಳನ್ನು ಮಕ್ಕಳ ಎದುರಲ್ಲೆ ಕತ್ತರಿಸಿ ಹಾಕಿತ್ತು ಪಾಪ.. ಆ ಚಿಕ್ಕ ಕಂದಮ್ಮಗಳಿಗೆ ಅದನ್ನು ನೋಡಿ ಗಾಬರಿಗೊಂಡು ಕಿರುಚುವುದು ಬಿಟ್ಟರೆ ಬೇರೇನು ಮಾಡಲೂ ತಿಳಿಯಲ್ಲಿಲ್ಲ .ಅಷ್ಟಕ್ಕೂ ಮಾಸ್ತರರು ಮಾಡಿದ ತಪ್ಪೇನು ಗೊತ್ತೇ? ಶಾಲೆಗೆ ಬರುವುದಕ್ಕೂ ಮೊದಲು ಆರೆಸ್ಸೆಸ್ನ ಶಾಖೆಯನ್ನು ತಮ್ಮ ಮನೆಯ ಬಳಿ ನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಕಿಡಿಯನ್ನು ಹತ್ತಿಸುತ್ತಿದ್ದರು ಅಷ್ಟೇ. ಈ ದೇಶಸೇವೆಯ ಕಾರ್ಯ ಕೆಂಪು ಉಗ್ರರಿಗೆ …. ಅಲ್ಲಲ್ಲ ಸಿಪಿಐಎಂ ಗೂಂಡಾಗಳಿಗೆ ತಪ್ಪಾಗಿ ಕಂಡಿತ್ತೋ ಏನೋ..ಅಷ್ಟೇ ಮಾಸ್ತರರ ಎರಡು ಕಾಲೂಗಳೂ ,ಕೈಗಳೂ, ಸ್ವಾದಿನ ಕಳಿದುಕೊಂಡುಬಿಟ್ಟರು.ಆದರೂ ದೇಶಸೇವೆಯ ಕಾರ್ಯವನ್ನು ಅವರಿನ್ನೂ ಬಿಟ್ಟಿಲ್ಲ ಬಿಡಿ.
ಇದು ಒಂದು ದೃಷ್ಟಾಂತವಷ್ಟೇ. ಸಿಪಿಐಎಂ ಗೂಂಡಾಗಳು ಅದೆಷ್ಟೋ ಆರೆಸ್ಸೆಸ್ ಕಾರ್ಯಕರ್ತರು ಬಲಿಯಾಗಿರುವ ದೃಷ್ಟಾಂತಗಳಿವೆ.ದೇಶಕ್ಕಾಗಿ ಜೀವಕೊಡಲೂ ತಯಾರಿರುವ ಸಂಘದ ಕಾರ್ಯಕರ್ತರ ಜೀವ ತರಗೆಲೆಗಳಂತೆ ಉದುರುತ್ತಿದ್ದರೂ ಸರಕಾರಕ್ಕೆ ಈ ಬಗೆಗೆ ಚಿಂತೆನೇ ಇಲ್ಲ .ಏಕೆಂದರೆ ತಮ್ಮ ಓಟ್ ಬ್ಯಾಂಕ್ ಎಲ್ಲಿ ನಿಂತು ಹೋಗುವುದೋ ಎಂಬ ಭಯವಷ್ಟೇ ಹಿಂದೊಮ್ಮೆ ಕೇವಲ ಶಾಂತಿ ಮಾತ್ರ ನೆಲೆಸಿದ್ದ ನಾಡಲ್ಲಿ ಇಂದು ಕೇವಲ ಅಟ್ಟಹಾಸವಷ್ಟೇ. ಸಂಘದ ಮೇಲೆ ಇಷ್ಟೋಂದು ಆಕ್ರಮಣವಾಗುತಿದ್ದರೂ ಕೇರಳದಲ್ಲಿ ಸಂಘದ ಚಟುವಟಿಕೆ ನಿಂತಿಲ್ಲ .ಕೇರಳದ ದೇವಾಲಯವೊಂದರಲ್ಲಿ ಇತ್ತೀಚೆಗೆ ನಡೆದ ಪಟಾಕಿ ಸ್ಪೋಟದಲ್ಲಿ ಗಾಯಗೊಂಡ ಭಕ್ತರ ನೆರವಿಗೆ ಸಾಲುಗಟ್ಟಿ ನಿಂತದ್ದು ಇದೇ ಆರೆಸ್ಸೆಸ್ ಎಂಬ ದೇಶಭಕ್ತ ಸಂಘಟನೆ.
ಇಂದು ಕೇರಳದಲ್ಲಿ ಹಿಂದು ಸಮಾಜ ತಲೆಯೆತ್ತಿ ನಡೆಯಲು ಮೂಲಭೂತ ಕಾರಣ ಅದೇ ದೇಶಭಕ್ತ ಸಂಘಟನೆಯ ಬಲಿದಾನಗಳು.”ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂಬ ಪ್ರಾರ್ಥನೆ. ಇಂದು ಕೇರಳ ರಾಜ್ಯದ ಆದಾಯದ ಸುಮಾರು 45% ಆದಾಯ ಹಿಂದೂ ದೇವಾಲಯಗಳಿಂದ ಬಂದಿದ್ದರೂ ಅಲ್ಲಿನ ಕೆಂಪು ಉಗ್ರ ಸರಕಾರ ಮಾತ್ರ ದೇವಾಲಯಗಳ ದಮನ ನೀತಿಯನ್ನು ಅನುಸರಿಸುತ್ತಲೇ ಇದೆ. ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ಕಾಶ್ಮೀರದಲ್ಲಿ ನಡೆಯುತ್ತಿರುವ ರಾಜಕೀಯ ಅರಾಜಕತೆ ನಮ್ಮ ಮನೆ ಬಾಗಿಲಿಗೂ ಬಂದು ಬೀಳುವುದರಲ್ಲಿ ಸಂದೇಹವಿಲ್ಲ ಆದುದರಿಂದ ನಾವೆಲ್ಲರೂ ಒಟ್ಟಾಗಿ ದೇಶದ ಉನ್ನತಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.. ದೇಶದ ಘನತೆ ಉತ್ತುಂಗ ಶಿಖರಕ್ಕೇರಿಸುವ ಜಾವಬ್ದಾರಿ ನಮ್ಮೆಲ್ಲರ ಮೇಲಿದೆ.

ಲೇಖನ: ಅಕ್ಷಯ್ ಜಿ ಭಟ್
ಫೋನ್ :7795867853

By Suddi9

Leave a Reply

Your email address will not be published. Required fields are marked *