ಬಂಟ್ವಾಳ: ಪುನರ್ ನಿರ್ಮಾಣಕ್ಕೆ ಸಜ್ಜಾಗಿರುವ ಪ್ರಕೃತಿ ರಮಣೀಯ ಶಿವಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಪುನರ್ ನಿರ್ಮಾಣದ ಮಹಾ ಕಾರ್ಯದ ಪ್ರಥಮ ಹಂತವಾಗಿ ದೇವಸ್ಥಾನದ ಮುಖ್ಯ ಪರಿವಾರ ದೇವರಾದ ಶ್ರೀ ಮಹಾಗಣಪತಿ ಶ್ರೀ ನಾಗದೇವರ ಬಾಲಾಲಯ ಪ್ರತಿಷ್ಠೆ ಬುಧವಾರ ಸಂಕಷ್ಠಿಯ ಶುಭ ಮುಹೂರ್ತದಲ್ಲಿ ಜರಗಿತು.ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನಿಲೇಶ್ವರ ಉಚ್ಚಿಲತ್ತಾಯ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮೇಶ್ವರ ಮಯ್ಯ ಮತ್ತು ವೈದಿಕರು ವೈಧಿಕ ವಿಧಿ ವಿಧಾನಗಳೊಂದಿಗೆ ದೇಗುಲದ ಸಮೀಪ ಪರಿವಾರ ದೇವರುಗಳಿಗೆ “ ಬಾಲಾಲಯ”ವನ್ನು ಪ್ರತಿಷ್ಠೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಮೋಕ್ತೆಸರರಾದ ಡಾ| ಪ್ರಶಾಂತ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ| ಆತ್ಮರಂಜನ್ ರೈ, ಉತ್ಸವ ಸಮಿತಿ ಅಧ್ಯಕ್ಷರು ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ. ನರೇಂದ್ರ ಬಾಬು ಯಶು ವಿಟ್ಲ, ಮೋಕ್ತೆಸರರಾದ ಕೃಷ್ಣ ನಾೈಕ್, ಸುಂದರ ಬಂಗೇರ, ಎಂ.ಎನ್. ಕುಮಾರ್, ಬಾಲಕೃಷ್ಣ ಪೂಜಾರಿ, ಮಾಧವ ಶೆಣೈ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿಯಾದ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಶಂಕರ ಆಚಾರ್ಯ ಬರಿಮಾರ್, ಕಿಶೋರ್ ಕುಮಾರ್ ಕುದ್ಮುಲ್, ಶಿಲ್ಪಿ ರಾಜೇಂದ್ರ ಕುಮಾರ್, ಶ್ರೀನಿವಾಸ್ ಗುರುಜ್ಯೋತಿ, ರುಕ್ಮಯ್ಯ ಸಪಲ್ಯ ಮೆಲ್ಕಾರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಸತೀಶ ಪಿ. ಸಾಲಿಯಾನ್, ಚಂದ್ರಶೇಖರ್ ನಾೈಕ್, ಗಿರೀಶ್ ಸಾಲ್ಯಾನ್, ಸುಬ್ರಹ್ಮಣ್ಯ ಕಾರಂತ್, ತಾರನಾಥ್, ಶಿವರಾಮ್ ಶೆಟ್ಟಿ, ದಯಾನಂದ ಬೊಂಡಾಲ, ಸದಾನಂದ ಬೋಳಂಗಡಿ ಹಾಗೂ ನರಹರಿ ಪರ್ವತದ ಮೇನೆಜರ್ ಆನಂದ್ ರವರು ಉಪಸ್ಥಿತರಿದ್ದರು.
