ಮಂಗಳೂರು : ಕೊಮು ಪ್ರಚೋದಿತ ಅಹಿತಕರ ಘಟನೆ ಜನಮಾನಸದ ಮನಸ್ಸಿನಿಂದ ಮಾಸುವ ಬೆನ್ನಲ್ಲೇ ಪಲೀಸರ ದ್ವಿಮುಖ ನೀತಿಯ ವಿರುದ್ದ ಹೋರಾಡಲು ಬಿಜೆಪ ಸಜ್ಜಾಗಿದೆ.ಮೊನ್ನೆ ಮೊನ್ನೆ ಬಿಸಿ ರೋಡಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಇವರ ಸಾವಿನ ನಂತರ ಹಿಂದುಪರ ಸಂಘಟನೆಗಳು ಮೃತ ಶರತ್ ಅವರ ಮೃತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಶವಯಾತ್ರೆಯ ಮೂಲಕ ಕರೆದೊಯ್ಯಲು ನಿಶ್ಚಯಿಸಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಕಿಡಿಗೇಡಿಗಳು ಶವಯಾತ್ರೆಗೆ ಕಲ್ಲು ತೂರಾಟ ನಡೆಸಿದ್ದರ ಬಗ್ಗೆ ವರದಿಯಾಗಿತ್ತು .
ಆದರೆ ಪ್ರಸ್ತುತ ಕಲ್ಲು ತೂರಾಟ ನಡೆಸಿದವರ ವಿರುದ್ಧ ತನಿಖೆ ನಡೆಸುವುದನ್ನು ಬಿಟ್ಟು ಶವಯಾತ್ರೆಯ ನೇತೃತ್ವ ವಹಿಸಿದ್ದ ನಾಯಕರಾದ ಅಸತ್ಯಜಿತ್ ಸುರತ್ಕಲ್ ಹಾಗೂ ಇನ್ನೂ ಹಲವಾರು ನಾಯಕರುಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಹಾಗಾಗಿ ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ರವರ ಮನೆಗೆ ರಾತ್ರಿ ವೇಳೆ ಯಾವುದೇ ಪುರ್ವಾನಿಮತಿಯಿಲ್ಲದೇ ದಾಳಿ ನಡೆಸಿದ್ದರು ಎನ್ನಲಾಗಿದೆ.
ಆ ವೇಳೆಯಲ್ಲಿ ಸತ್ಯಜಿತ್ ಮನೆಯಲ್ಲಿಲ್ಲದಿದ್ದರೂ ಕೇವಲ ಮಹಿಳೆಯರು ಮತ್ತು ಮಕ್ಕಳಿದ್ದ ಮನೆಗೆ ಧಾಳಿ ನಡೆಸಿದ್ದು ಖಂಡನಾರ್ಹ ಎಂದು ಮಂಗಳೂರು ಬಿಜೆಪಿ ಮಹಿಳಾ ಮೋರ್ಚಾದ ಪ್ತರಿಕಾ ಪ್ರಕಟಣೆ ತಿಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಇಬ್ಬಗೆ ನೀತಿ ಮತ್ತು ಪೊಲೀಸರ ಈ ಅಮಾನವೀಯ ನಡೆಯನ್ನು ವಿರೋಧಿಸಿ ಜುಲೈ13 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
