ಬಂಟ್ವಾಳ: ತಂದೆಯನ್ನು ನೋಡಲು ಬಂದ ಮಗಳು ಮತ್ತು ಅವರ ಇಬ್ಬರು ಮಕ್ಕಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುದು ಗ್ರಾಮದ ಮಾರಿಪಳ್ಳ ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಅರೋಗ್ಯ ವಿಚಾರಣೆಗಾಗಿ ಅವರ ಮಗಳು ಮೆಹನಾಜ್ (30) ಮಕ್ಕಳಾದ ನೂರಜಾಹನ್ ನಿಧಾ(10) ಮತ್ತು ಮಗ ಮಹಮ್ಮದ್ ಶಾಜಿ (6) ಅವರು ಜುಲೈ 1 ರಂದು ತಂದೆ ಮನಗೆ ಮಾರಿಪಳ್ಳಕ್ಕೆ ಬಂದು ವಾಪಾಸು 2 ತಾರೀಕಿನಂದು ಎಮ್ಮೆಕೆರೆ ತನ್ನ ಗಂಡನ ಶಮೀರ್ ಅವರ ಮನಗೆ ಹೋರಟು ಹೋದವರು ಮನಗೆ ತಲುಪದೆ ಕಾಣೆಯಾಗಿದ್ದಾರೆ ಎಂದು ಮೆಹನಾಜ್‍ನ ತಮ್ಮ ಅಬ್ದುಲ್ ಬಶೀರ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *