ಉಡುಪಿ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಪ್ರತಿನಿಧಿ ಹಾಗೂ ಮಾರಾಟ ಪ್ರತಿನಿಧಿಗಳ ಸಂಘ (BMSRA) ಉಡುಪಿ ಜಿಲ್ಲೆವತಿ ಇಂದ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಅಭಿನಂದಿಸಲಾಯಿತು ಹಾಗೂ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.IMG-20170701-WA0030

ಸಂಘಟನೆಯ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಸಂದೀಪ್ ಪ್ರಭು, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೆ ಜಿ, ಖಜಾಂಚಿ ದೇವೇಂದ್ರ ಶ್ರೀಯನ್ ಇವರನ್ನೊಳಗೊಂಡ ಸುಮಾರು 25 ಕಾರ್ಯಕರ್ತರ ತಂಡ ಶನಿವಾರ ಬೆಳಿಗ್ಗೆ ವಿವಿಧ ಬಗೆಯ ಹಣ್ಣುಗಳೊಂದಿಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣುಗಳನ್ನು ವಿತರಿಸಿದರು. ಜಿಲ್ಲಾ ಸರ್ಜನ್ ಡಾ|| ಮಧುಸೂದನ್ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ ಇದರ ಪ್ರಾಯೋಜಕತ್ವದಲ್ಲಿ ವಿವಿಧ ಔಷಧ ಸಸಿಗಳನ್ನು ಸಂಸ್ಥೆಯ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ವಿತರಿಸಿದರು. ಸಂಘಟನೆಯ ಕಾರ್ಯಕರ್ತರಾದ ರಾಘವೇಂದ್ರ ಕಾರ್ವಾಲು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *