ಉಡುಪಿ: ಭಾರತೀಯ ಮೆಡಿಕಲ್ ಸೇಲ್ಸ್ ರೆಪ್ರೆಸೆಂಟಿವ್ ಅಸೋಸಿಯೇಷನ್ ಉಡುಪಿ ಇದರ ವತಿಯಿಚಿದ ಜುಲ್ಯೆ 1 ಶನಿವಾರದಂದು ಉಡುಪಿ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ವ್ಶೆದ್ಯರಿಗೆ ಗಿಡ ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವೇಣುಗೋಪಾಲ್ ಸಿ,ಕಾರ್ಯದರ್ಶಿ ಸಂದೀಪ್ ಪ್ರಭು,ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ,ದೇವೇಂದ್ರ ಶ್ರೀಯಾನ್, ಮಲಬಾರ್ ಗೋಲ್ಢ್ ಅಧಿಕಾರಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.
