ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂಟ್ವಾಳ ಇದರ ವತಿಯಿಂದ ಆಚಾರಿಪಲ್ಕೆ ಸ.ಹಿ.ಪ್ರಾ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಗಿರೀಶ್ ಕುಲಾಲ್ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿದ್ಯಾಚೇತನ ಟ್ರಸ್ಟ್ನ ಕಾರ್ಯದರ್ಶಿ ಸದಾನಂದ ಶೆಟ್ಟಿಯವರು ಪರಿಸರ ಎಂಬುದು ದೇವರು ಮನುಷ್ಯನಿಗೆ ಕೊಟ್ಟ ಕೊಡುಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಉಪಯೋಗಿಸಿ ಮುಂದಿನ ಪೀಳಿಗೆಗೂ ಸ್ವಚ್ಛ ಪರಿಸರವನ್ನು ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು. ಜನಜಾಗೃತಿ ವಲಯ ಸಮಿತಿ ಸದಸ್ಯರಾದ ದೇವಪ್ಪ ಕುಲಾಲ್, ವಲಯಾಧ್ಯಕ್ಷರಾದ ಪುರುಷೋತ್ತಮ ಪೂಜಾರಿ, ವಲಯ ಮೇಲ್ವಿಚರಕರಾದ ರಮೇಶ್ ಎಸ್, ಸೇವಾಪ್ರತಿನಿಧಿ ರೇವತಿ ಉಪಸ್ಥಿತರಿದ್ದರು. ರಾಜೇಶ್ರವರು ಸ್ವಾಗತಿಸಿ, ವಂದಿಸಿದರು.
