ಬಂಟ್ವಾಳ: ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬಲ್ಲಿ ಅಂಗಡಿಯೊಂದರ ಬಳಿ ಶಾಲೆಗೆ ಹೋಗುತ್ತಿದ್ದ ಮಿತ್ತಲಚ್ಚಿಲು ಎಂಬಲ್ಲಿನ ವಿದ್ಯಾರ್ಥಿನಿಯೊಬ್ಬರಿಗೆ ಇಲ್ಲಿನ ರಿಕ್ಷಾ ಚಾಲಕನೊಬ್ಬ ಕೈ ಹಿಡಿದು ಎಳೆದ ಘಟನೆ ಶುಕ್ರವಾರ ನಡೆದಿದೆ. ಆರೋಪಿಯನ್ನು ಕೆದ್ದಳಿಕೆ ನಿವಾಸಿ ದಿವಂಗತ ಬಾಬು ಎಂಬವರ ಪುತ್ರ ರಿಕ್ಷಾ ಚಾಲಕ ಸೀತಾರಾಮ ಎಂದು ಗುರುತಿಸಲಾಗಿದೆ.

ಈತನು ಶುಕ್ರವಾರ ಬೆಳಿಗ್ಗೆ ಸುಮಾರು 9ಗಂಟೆಗೆ ಶಾಲೆಗೆ ಹೋಗುತ್ತಿದ್ದ ಬಾಲಕಿಯೊಬ್ಬರಲ್ಲಿ ಕೊಡೆ ತಂದಿಲ್ವಾ..? ಎಂದು ಪ್ರಶ್ನಿಸಿ ಬಳಿಕ ಆಕೆಯ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನು ಈಗಾಗಲೇ ವಿವಾಹವಾಗಿ ನಾಲ್ಕು ಮಕ್ಕಳಿದ್ದು ಅವರನ್ನು ತವರು ಮನೆಗೆ ಬೆನ್ನಟ್ಟಿದ್ದಾನೆ. ಈತನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಲಾಗಿದ್ದು ಶೀಘ್ರವೇ ಬಂಧಿಸುವುದಾಗಿ ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *