ನಂದಾವರ : ಶ್ರೀ ವಿನಾಯಕ ಯೋಗ ಸಂಘ, ನಂದಾವರ- ಪತಂಜಲಿ ಯೋಗಪೀಠ ಹರಿದ್ವಾರ ಇದರ ವತಿಯಿಂದ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಸ್ಥಾನದಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಮಹೇಶ್ ಭಟ್, ದೀಪ ಬೆಳಗಿಸುವುದರೊಂದಿಗೆ ಉದ್ಘಾಟನಾ ಕಾರ್ಯಕ್ರಮ ಜರುಗಿತು.

IMG-20170623-WA0013

IMG-20170623-WA0014

IMG-20170623-WA0015

ಸಂಘದ ವತಿಯಿಂದ ಸುಮಾರು ಒಂದುವರೆ ಗಂಟೆಗಳ ಕಾಲ ಸಾಮೂಹಿಕ ಯೋಗ ಕಾರ್ಯಕ್ರಮ ಶ್ರೀ ಪ್ರಕಾಶ್.ಎಲ್.ಎಸ್. ಶರತ್ ಕುಮಾರ್, ಸಂತೋಷ್ ಕುಮಾರ್ ಇವರ ನಿರ್ದೇಶನದಲ್ಲಿ ಪತಂಜಲಿ ಪೀಠದ ಯೋಗ ಗುರು ಪ್ರದೀಪ್.ಜಿ. ಯವರ ಮಾರ್ಗದರ್ಶನದಂತೆ ಜರುಗಿತು.
ವಿನಾಯಕ ಯೋಗ ಸಂಘ ಮತ್ತು ಮಾಚಿದೇವ ಯೋಗ ಸಂಘದ ಸದಸ್ಯರುಗಳು, ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

By Suddi9

Leave a Reply

Your email address will not be published. Required fields are marked *