ಬಂಟ್ವಾಳ : ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಮತ್ತು ತಾಲೂಕು ಪಂಚಾಯತ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಪೂರ್ವಾಹ್ನ 7-30 ಗಂಟೆಗೆ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡ್, ಇಲ್ಲಿ ಬಂಟ್ವಾಳ ತಾಲೂಕು ಪಂಚಾಯತ್‍ನ ಉಪಾಧ್ಯಕ್ಷರಾದ ಶ್ರೀ ಅಬ್ಬಾಸ್ ಆಲಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.DSC_0214
ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ಬಂಟ್ವಾಳ ತಾಲೂಕು ತಹಶೀಲ್ದಾರರಾದ ಶ್ರಿ ಪುರಂದರ ಹೆಗ್ಡೆಯವರು ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಸಿಪ್ರಿಯನ್ ಮಿರಾಂದ, ತಾಲೂಕು ಪಂಚಾಯತ್‍ನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಸಿ.ಬಂಗೇರ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಕುಲಾಲ್, ಯುವಜನ ಕ್ರೀಡಾಧಿಕಾರಿ, ಶ್ರೀ ನವೀನ್.ಪಿ.ಎಸ್. ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಶ್ರೀಮತಿ ಶಾಂಭವಿ ಎಸ್.ರಾವ್ ಮತ್ತು ಸಿಬ್ಬಂದಿಗಳು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.DSC_0237

 ಆಯುಷ್ ಇಲಾಖೆಯ ಡಾ|| ಮಣಿಕರಣಿಕ ಇವರ ಉಸ್ತುವಾರಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಸ್ವಾತಿ ಎನ್.ಎಸ್. ಮತ್ತು ವೇದ.ಎಂ.ಆರ್. ಇವರ ನಿರ್ದೇಶನದಲ್ಲಿ ಯೋಗಾ ಕಾರ್ಯಕ್ರಮ ಒಂದು ಗಂಟೆ ಕಾಲ ಜರುಗಿತು.

By suddi9

Leave a Reply

Your email address will not be published. Required fields are marked *