ಬಂಟ್ವಾಳ: ಕಳೆದ ಮೂರು ವಾರಗಳಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಸೆ.೧೪೪ ನಿಷೇದಾಜ್ಙೆ ಜಾರಿಯಲ್ಲಿರುವಂತೆ ಮಂಗಳವಾರ ಸಂಜೆ ಕಲ್ಲಡ್ಕದಲ್ಲಿ ಮತ್ತೆ ಘರ್ಷಣೆ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ಎರಡು ವಿಭಿನ್ನ ಕೋಮಗಳ ತಂಡದ ಮಧ್ಯೆ ಘರ್ಷಣೆ ನಡೆದಿದ್ದು,ಪರಿಣಾಮ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದವು .ಉದ್ವಿಗ್ನ ಸ್ಥಿತಿ ಉಂಟಾಯಿತು. ಕಲ್ಲಡ್ಕದ ಮೇಲಿನ ಪೇಟೆಯಲ್ಲಿ ಹಿ.ಜಾ.ವೇ. ಮುಖಂಡ ರತ್ನಾಕರ ಶೆಟ್ಟಿ ಮತ್ತು ರವಿ ಭಂಡಾರಿ ಎಂಬವರಿಗೆ ಇಲ್ಲಿನ ಖಲೀಲ್ ಮತ್ತು ಸುಮಾರು 50ಮಂದಿಯ ಗುಂಪು ತಡೆದು ನಿಲ್ಲಿಸಿ ಹಲ್ಲೆಗೈದಿದೆ ಎಂದು ತಿಳಿದು ಬಂದಿದೆ . ಈ ಘಟನೆಯ ಬೆನ್ನಲ್ಲೆ ಎರಡು ಗುಂಪಿನ ಯುವಕರು ಜಮಾಯಿಸಿತು.
ಇದೇ ವೇಳೆ ಒಂದು ಕೋಮಿನ ಸುಮಾರು ೫೦ ಮಂದಿಯ ದುಷ್ಕರ್ಮಿಗಳ ಗುಂಪು ಪಂಚವಟಿ ಕಟ್ಟಡದ ಒಳಗೆ ನುಗ್ಗಿ ಪೊಲೀಸರ ಸಮ್ಮಖದಲ್ಲಿ ದಾಂಧಲೆ ನಡೆಸಿದಲ್ಲದೆ ಹಿಂದು ಸಮುದಾಯದ ಅಂಗಡಿಗಳನ್ನು ಪುಡಿಗೈದಿದ್ದಾರೆಂದು ತಿಳಿದು ಬಂದಿದೆ . ಈ ವೇಳೆ ಕಲ್ಲು ತೂರಾಟ ನಡೆದಿದ್ದು, ಸಾಲದೆಂಬಂತೆ ಬಂದೋಬಸ್ತಿನಲ್ಲಿದ್ದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಎಸ್ ಐ ರಕ್ಷೀತ್ ತಲೆಗೂ ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ. ಹಾಗೆಯೆ ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಪುಡಿಗೈದಿದ್ದು,ಸಿಕ್ಕ ಸಿಕ್ಕವರ ಮೇಲೂ ದಾಳಿ ನಡೆಸಿದ್ದಾರೆಂದು ಹೇಳಲಾಗಿದ್ದು, ಸೆಕ್ಷನ್ ಜಾರಿಯಲ್ಲಿದ್ದರೂ ಪೊಲೀಸರು ದುಷ್ಕರ್ಮಿಗಳ ವಿರುದ್ದ ಕ್ರಮ ಕೈ ಗೊಳ್ಳಲು ಅಸಹಾಯಕರಾಗಿದ್ದರು.
ಗಾಯಾಳು ರತ್ನಾಕರ ಅವರನ್ನು ಪುತ್ತೂರಿನ ಅಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ದಾಖಲಾಗಿದ್ದದರೆ, ಇತ್ತ ಖಲೀಲ್ ಕೂಡ ತನಗೂ ಹಲ್ಲೆ ಗೈಯಲಾಗಿದೆ ಎಂದು ತುಂಬೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತಿಳಿದು ಬಂದಿದೆ . ಈ ಸಂದರ್ಭ ದಲ್ಲಿ ಶ್ರೀ ರಾಮ ಮಂದಿರದ ಹಿಂಬದಿಯಲ್ಲಿರುವ ಹಂಚಿನ ಕಟ್ಟಡಕ್ಕೆ ಕಲ್ಲು ತೂರಲಾಗಿದ್ದು,ಹಂಚು ಪುಡಿಯಾಗಿದೆ.ಕಲ್ಲು ತೂರಾಟದಿಂದ ಹಲವಾರು ಮಂದಿ ಅಮಾಯಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ೨೬ ರಂದು ನಡೆದ ಘಟನೆಯ ಬಳಿಕ ಕಲ್ಲಡ್ಕದಲ್ಲಿ ಪೊಲೀಸ್ ಬಂದೋಬಸ್ತು .ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.ಅಲ್ಲದೆ ನಿಷೇದಾಜ್ಙೆಯನ್ನು ಮುಂದುವರಿಸಲಾಗಿತ್ತು.
ಈನಡುವೆ ಘರ್ಷಣೆ ಮತ್ತೆ ಮುಂದುವರಿದಿರುವುದು ನಾಗರಿಕರ ಆತಂಕವನ್ನು ಹೆಚ್ಚಿಸಿದೆ.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚುವರಿ ಪೊಲೀಸರೊಂದಿಗೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮುಂಜಾಗ್ರತಾಕ್ರಮವಾಗಿ ಕಲ್ಲಡ್ಕದಲ್ಲಿ ಮತ್ತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.ಜೂ.೧೪ ರಂದು ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಹನುಮಂತನ ಶಿಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು,ಇದಕ್ಕೆ ಅಡ್ಡಿ ಪಡಿಸುವ ದುರುದ್ದೇಶದಿಂದ ದುಷ್ಕರ್ಮಿಗಳು ಈಕ್ರತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ ಪಿ ಭೂಷಣ್ ಬೊರಸೆ,ಡಿವೈಎಸ್ಪಿ ರವೀಶ್ ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
