ಬಂಟ್ವಾಳ: ಬಂಟ್ವಾಳ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಅನುಕೂಲದ ದೃಷ್ಟಿಯಿಂದ ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ ರೈಯವರ ಮಾರ್ಗದರ್ಶನದಲ್ಲಿ ಅವರ ಅಭಿಮಾನಿ ಬಳಗ ನಿರೆಲ್ ಎನ್ನುವ ಅಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಈಗಘಾಲೇ ಸಚಿವ ರಮನಾಥ ರೈಯವರು ಹಸಿರು ನಿಶಾನೆ ತೋರಿ ನೂತನ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ. ರಾಜ್ಯ ಸಕರ್ಾರದ 108 ವಾಹನದಂತೆ ದಿನದ 24 ಗಂಟೆಗಳ ಕಾಲ ನಿರೆಲ್ ಅಂಬ್ಯುಲೆನ್ಸ್ ಸಾರ್ವಜನಿಕರಿಗೆ ಸೇವೆ ನೀಡಲಿದೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿರು ಈ ಅಂಬ್ಯಲೆನ್ಸ್ನಿಂದ ಉಚಿತ ಸೇವೆಯನ್ನು ಪಡೆಯ ಬಹುದಾಗಿದೆ. ಈ ಬಗ್ಗೆ 9945133009 ಎನ್ನುವ ಟೋಲ್ ಫ್ರೀ ಸಮಖ್ಯೆಯನ್ನು ನೀಡಲಾಗಿದ್ದು ಸಾರ್ವಜನಿಕರು ತುತರ್ು ಸಂದರ್ಭ ಅಥವಾ ಆರೋಗ್ಯ ಸೇವೆ ಬೇಕಾದಲ್ಲಿ ಈ ದೂರವಾಣಿ ಸಂಖ್ಯೆಯನ್ನು ಸಂಪಕರ್ಿಸಲು ಅವಕಾಶ ಕಲ್ಪಿಸಲಾಗಿದೆ. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ತಕ್ಷಣವೇ ಅಂಬ್ಯಲೆನ್ಸ್ ಮನೆ ಬಾಗಿಲಿಗೆ ಆಗಮಿಸುತ್ತದೆ. ಅಮಬ್ಯಲೆನ್ಸ್ನಲ್ಲಿ ರೋಗಿಯ ಪ್ರಾಥಮಿಕ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಳವಡಿಸಲಾಗಿದೆ. ಬಾಣಂತಿಯರನ್ನು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟವರ ಮೃತದೇಹವನ್ನು ಮನೆಗೆ ತರಲು, ಈ ವಾಹನವನ್ನು ಬಳಕೆ ಮಾಡ ಬಹುದಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರ ಭಾಗದ ಜನರಿಗೂ ಈ ಸೇವೆಯ ಅವಕಾಶ ನೀಡಲಾಗಿದ್ದೂ ಪ್ರತೀ ಕಿ.ಮೀಗೆ 10 ರುಪಾಯಿಯಂತೆ ದರ ನಿಗದಿ ಪಡಿಸಲಾಗಿದೆ. ಈಗಾಗಲೇ ಅಂಬ್ಯಲೆನ್ಸ್ ಸೇವೆ ಯಶಶಸ್ವಿಯಗಿ ಕಾರ್ಯರಂಭಗೊಳಿಸಿದ್ದು ಎರಡು ಪ್ರಕರಣಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.



