ವಾಮಂಜೂರು:ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದಿರುವ ಪ್ರದೇಶವಾಗಿದ್ದ ವಾಮಂಜೂರು ಪರಿಸರವು ಕಳೆದೆರಡು ಶತಮಾನಗಳಿಂದ ಈ ಪರಿಸರವನ್ನು ಎಲ್ಲರು ಬೆರಗುಕಣ್ಣಿನಿಂದ ನೋಡುವಂತಹ ಮಟ್ಟಕ್ಕೆ ಅಭಿವೃದ್ಧಿ ಪಂಥದತ್ತ ಸಾಗುತ್ತಿದೆ. ಇತಿಹಾಸ ಪ್ರಸಿದ್ಧ ಶ್ರೀ ಅನಂತ ಪದ್ಮನಾಭ ಕ್ಷೇತ್ರ, ಮಂಗಳಜ್ಯೋತಿ ಸಮಗ್ರ ಶಾಲೆ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮ, ಇಂತಹ ಧಾರ್ಮಿಕ ಶೈಕ್ಷಣಿಕ ಮನೋರಂಜನೀಯ ತಾಣವಾದ ಈ ಪರಿಸರದಲ್ಲಿ 1921ರಂದು ಫಾ|ರೇಮಂಡ್ರ ಅಮೃತ ಹಸ್ತದಿಂದ ಬೆಥನಿ ವಿದ್ಯಾಸಂಸ್ಥೆ ಪ್ರಾರಂಭವಾಯಿತು. ಇಂದು ಈ ವಿದ್ಯಾಸಂಸ್ಥೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದುಪದವಿ ಶಿಕ್ಷಣದವರೆಗೂ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳಿಗೆ ವಿದ್ಯೆ ನೀಡಿದ ವಿದ್ಯಾ ದೇಗುಲ. ಇಂತಹ ವಿದ್ಯಾಸಂಸ್ಥೆಯ ಭಾಗವಾದ ಸೈಂಟ್ ರೇಮಂಡ್ಸ್ ಪದವಿ ಕಾಲೇಜು 2009 ರಲ್ಲಿ ಪ್ರಾರಂಭವಾಯಿತು. ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ಭವಿಷ್ಯ ರೂಪಿಸಿದ್ದಾರೆ. “ಕೈ ಮುಗಿದು ಒಳಗೆ ಬಾ, ವಿದ್ಯಾದೇಗುಲವಿದು” ಎನ್ನುವ ಅರ್ಥಗರ್ಭಿತ ಮಾತಿನಿಂದ ಎಲ್ಲಾ ಜ್ಞಾನದಾಹಿಗಳ ದಾಹ ತೀರಿಸುವ ಭರವಸೆಯ ಚೇತನ ಈ ವಿದ್ಯಾಸಂಸ್ಥೆ, ಸುತ್ತ ಮುತ್ತಲಿನ ಪರಿಸರವಾದ ಉಳೈಬೆಟ್ಟು, ಎಡಪದವು, ಗಂಜಿಮಠ, ಕುಪ್ಪೆಪದವು, ಪೊಳಲಿ, ಬಜಪೆ, ಅಡ್ಡೂರು, ನೀರುಮಾರ್ಗ, ಬೋಂದೆಲ್, ವಾಮಂಜೂರು ಈ ಪರಿಸರದ ವಿದ್ಯಾರ್ಥಿಗಳಿಗೆ ಈ ನಮ್ಮ ವಿದ್ಯಾಸಂಸ್ಥೆ ಒಂದು ವರದಾನವಾಗಿದೆ.
ಬಿ.ಎ., ಬಿ.ಕಾಂ., ಬಿ.ಸಿ.ಎ., ಬಿ.ಬಿ.ಎಂ ಕೋರ್ಸ್ಗಳನ್ನು ಹೊಂದಿದ್ದು ಕಳೆದ 3 ವರ್ಷಗಳಿಂದ ಬಿ.ಸಿ.ಎ.ಯಲ್ಲಿ 100% ಫಲಿತಾಂಶ ಬರುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಉಳಿದ ವಿಭಾಗಗಳಲ್ಲಿ ಪ್ರತಿ ವರುಷ 85% ರಿಂದ 95% ಫಲಿತಾಂಶ ದಾಖಲಾಗುತ್ತ ಇದೆ. ತೀರಾ ಕಡಿಮೆ ಅಂಕ ಗಳಿಸಿ ಇಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳಿಸಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಅದಕ್ಕೆ, ಅನುಭವಿ ಶಿಕ್ಷಕರ ಹಾಗೂ ಪ್ರಾಂಶುಪಾಲರ ಶ್ರಮ ಹಾಗೂ ಪ್ರೋತ್ಸಾಹವೇ ಕಾರಣ.
ಸದಾ ಕ್ರಿಯಾಶೀಲವಾಗಿರುವ ಎನ್.ಎಸ್.ಎಸ್. ಘಟಕವು ಜಿಲ್ಲೆ, ರಾಷ್ಟ್ರೀಯ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಇದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, 3 ಹಂತಗಳಲ್ಲಿ ಕಾಲೇಜಿನ ಶುಲ್ಕವನ್ನು ಕಟ್ಟುವ ಸೌಲಭ್ಯವಿದೆ. ಕಾಲೇಜಿನ ಶೈಕ್ಷಣಿಕ ವಿಷಯಗಳ ಜೊತೆಗೆ ಈಡಿee Iಟಿಣeಡಿಟಿeಣ ಃಡಿoತಿsiಟಿg, ಃeಚಿuಣiಛಿiಚಿಟಿ ಛಿouಡಿse & ಅomಠಿuಣeಡಿ ಅouಡಿse ಗಳು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಶಿಕ್ಷಣದ ಜೊತೆಗೆ, ಜೀವನ ಮೌಲ್ಯದ ಪಾಠಗಳನ್ನು ಭೋದಿಸಲಾಗುತ್ತಿದೆ. ವಿದ್ಯಾರ್ಥಿಗಳ ಮನೋವಿಕಾಸ, ಮನೋರಂಜನೆಗೆ ಇಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವವನ್ನು ತಿಳಿಸಲಾಗುವುದು. ವಿದ್ಯಾರ್ಥಿಗಳು ಸಮಾಜ ಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ, ಕಾಲೇಜಿನಲ್ಲಿ 6 ಸಂಘಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಇವೆ. ಜ್ಞಾನ ದಾಹ ತೀರಿಸುವ ಸುಸಜ್ಜಿತ ಗ್ರಂಥಾಲಯ, ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಶುಚಿ-ರುಚಿಕರವಾದ ಕ್ಯಾಂಟೀನ್ ಸೌಲಭ್ಯ, ವಿಶಾಲವಾದ ಆಟದ ಮೈದಾನ ಎಂತಹವರನ್ನು ಮೂಕ ವಿಸೃತರನ್ನಾಗಿ ಮಾಡುವ ಶಾಂತಿಯುತವಾದ ಕ್ಯಾಂಪಸ್ ಎಲ್ಲಾವೂ ಇಲ್ಲಿ ಇದೆ.
ಕಾಲೇಜಿನ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಆಡಳಿತ ಮಂಡಳಿಯ ಪಾತ್ರ ಶ್ಲಾಘನೀಯವಾಗಿದೆ. ಜೊತೆಗೆ ಶಿಕ್ಷಕ-ರಕ್ಷಕ ಸಂಘದವರ ಪ್ರೋತ್ಸಾಹವು ಇದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಲುವಾಗಿ Pಟಚಿಛಿemeಟಿಣ ಛಿeಟಟ ಕೂಡ ಇಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಕಾಲೇಜಿನ ಜೊತೆ ಸದಾ ಉತ್ತಮ ಸಹಕಾರ ಸಂಬಂಧವನ್ನು ಇಟ್ಟು ಕೊಂಡಿರುವ ಹಳೆ ವಿದ್ಯಾರ್ಥಿ ಸಂಘವು ಇಲ್ಲಿ ಸ್ಮರಣೀಯವಾಗಿದೆ.
ಸೈಂಟ್ ರೈಮಂಡ್ ಕಾಲೇಜು ಅನೇಕ ವಿದ್ಯಾರ್ರ್ಥಿಗಳನ್ನು ಸಾಕ್ಷರಸ್ಥರನ್ನಾಗಿ ಮಾಡಿಸಿ ಈ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಇಂದು ಯಶಸ್ವಿಯಾಗಿದೆ. ಈ ವಿದ್ಯಾ ಸೇವೆಯ ಪ್ರಯಾಣ ಸದಾ ಸಾಗುತ್ತ ಇರಲಿ……….

