ಬಂಟ್ವಾಳ: ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರು ಮತ್ತು ಯು.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇದರ ಸಹಕಾರದೊಂದಿಗೆ 15ನೇ ವರ್ಷದ ಕಾಗರ್ಿಲ್ ವಿಜಯದ ಸವಿನೆನಪಿನಲ್ಲಿ ರಕ್ತದಾನ ಶಿಬಿರವು ಜುಲೈ 27ನೇ ರವಿವಾರ ಬೆಳಿಗ್ಗೆ 9.30ರಿಂದ ಬಂಟ್ವಾಳ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿರುವುದು. ಕಾರ್ಯಕ್ರಮವನ್ನು ಸರ್ಕಲ್ ಇನ್ಸ್ಪೆಕ್ಟರ್ ಕೆ.ಯು.ಬೆಳಿಯಪ್ಪ ಉದ್ಘಾಟಿಸಲಿರುವರು. ಪುರಸಭಾ ಸದಸ್ಯ ಗೋವಿಂದ ಪ್ರಭು, ಬಂಟ್ವಾಳ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೋಕ್ತೇಸರ ಅರಳ ದಾಮೋದರ ಪ್ರಭು, ನಂದನಹಿತ್ತಿಲು ಅರಸು ಜುಮಾದಿ ಬಂಟ ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ಗಣೇಶ್ ಸುವರ್ಣ, ಪುಷ್ಪಜ್ಯೋತಿ ಗ್ರೂಪ್ಸ್ ಮಾಲಕ ರವಿಚಂದ್ರ. ಬಿ, ಮಂಗಳೂರು ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಪದ್ಮನಾಭ ಯು.ಎಸ್.ನಾವೂರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಘಟಕದ ಅಧ್ಯಕ್ಷರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
