ಬಂಟ್ವಾಳ :ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ರಾಷ್ಟ್ರವನ್ನು ಕಟ್ಟಬಲ್ಲರು. ಇಲ್ಲದಿದ್ದರೆ ಅವರಿಂದಲೇ ರಾಷ್ಟ್ರ ನಿರ್ನಾಮವಾದೀತು. ಯುವಕರು ದೇವ ಭಕ್ತಿ ಮತ್ತು ದೇಶ ಭಕ್ತಿಯೊಂದಿಗೆ ಸತ್ಕಾರ್ಯದಿಂದ ತೊಡಗಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಧರ್ಮ ಮಾರ್ಗದಲ್ಲಿ ಸತ್ಕಾರ್ಯಗಳನ್ನು ಮಾಡಿ ಪುರುಷಾರ್ಥದ ಮೂಲಕ ಜೀವನ ಸಾರ್ಥಕಗೊಳಿಸಬೇಕು ಎಂದು ಒಡಿಯೂರು ಕ್ಷೇತ್ರದ ಶ್ರೀ ಮಾತಾನಂದಮಯಿ ಹೇಳಿದರು.

ಅವರು ಶ್ರೀ ಗುಡ್ಡ್ಡಚಾಮುಂಡೇಶ್ವರಿ ಪೆರಾಜೆ ಒಲಸರಿ ಜಾತ್ರೆಯ ಸಂದರ್ಭ ಭಾನುವಾರ ನಡೆದ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಜಯಾನಂದ ಪೆರಾಜೆ ಇವರನ್ನು ಸನ್ಮಾನಿಸಿ , ಹಿರಿಯ ಸಹಕಾರಿ ಧುರೀಣ ಬಿ.ಟಿ.ನಾರಾಯಣ ಭಟ್ ಅಭಿನಂದನಾ ಭಾಷಣ ಮಾಡಿದರು. ಪೆರಾಜೆಯವರು ಸ್ವಯಂ ಸೇವಕರಾಗಿ, ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಂಡು ಗ್ರಾಮದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಶ್ರೀ ರಾಮ ಪ್ರೌಢ ಶಾಲೆ ಕಲ್ಲಡ್ಕದಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದು, ಉತ್ತಮ ಶಿಕ್ಷಕರಾಗಿ ವಿದ್ಯಾಥಿಗಳಿಂದ ಗುರುತಿಸಲ್ಪಟ್ಟಿದ್ದಾರೆ. ಪತ್ರಕರ್ತರಾಗಿ, ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಸಂಘಟನಾ ಚತುರರಾಗಿದ್ದಾರೆ ಎಂದು ಅಭಿನಂದಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕಚ್ಚೂರು ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಬಾರ್ಕೂರಿನ ಸುರೇಶ್ ಭಂಡಾರಿ ಕಡಂದಲೆ ಮಾತನಾಡಿ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ ಸಮಾಜ ಸೇವಕರಾಗಿರುವ ಶಿಕ್ಷಕ ಜಯಾನಂದ ಪೆರಾಜೆಯವರನ್ನು ಗುರುತಿಸಿ ಗೌರವಿಸಿ ಯುವ ವೇದಿಕೆ ಇದರ ವತಿಯಿಂದ ಸನ್ಮಾನಿಸುತ್ತಿರುವುದು ಉತ್ತಮ ಗುರುವನ್ನು ಅಭಿನಂದಿಸಿದಂತಾಗಿದೆ ಎಂದರು. ಜ್ಯೋತಿಷಿ ಕೆ.ಮೋಹನ್ದಾಸ್ ಹೆಗ್ಡೆ ಕೊಪ್ಪಲ ,ನಾಟಿ ವೈದ್ಯ ಹೊನ್ನಪ್ಪ ಪೂಜಾರಿ ಏಣಾಜೆ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪೆರಾಜೆಗುತ್ತು ಶ್ರೀ ಕಾಂತ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಚಂದ್ರಶೇಖರ ಭಟ್ ಕುಕ್ಕಾಜೆ, ಯುವ ವೇದಿಕೆ ಸಂಚಾಲಕ ರಾಜಾರಾಮ ಭಟ್, ಜಯರಾಮ ರೈ ಅತಿಥಿಗಳಾಗಿದ್ದರು. ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸÀ ಪೂಜಾರಿ ಉಪಸ್ಥಿತರಿದ್ದರು.
ಯುವ ವೇದಿಕೆ ಸದಸ್ಯ ಭರತ್ ಸ್ವಾಗತಿಸಿ, ಕಾರ್ಯದರ್ಶಿ ಯತಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಪಂಚಾಯತ್ ಸದಸ್ಯ ಉಮೇಶ ಎಸ್. ಪಿ. ವಂದಿಸಿದರು. ತುಳುವೆರ ಒಡಲು ಜೋಡುಕಲ್ಲು ಇವರ ವತಿಯಿಂದ ಸುರೇಶ್ ಶೆಟ್ಟಿ ನಿರ್ದೆಶನದಲ್ಲಿ ಶ್ರೀಮತಿ ನಾಟಕ ಪ್ರದರ್ಶನಗೊಂಡಿತು ಬಳಿಕ ಗುಡ್ಡ ಚಾಮುಂಡಿ, ಪಂಜಿರ್ಲಿ ಮಲೆಕೊರತಿ ದೈವಗಳ ಒಲಸರಿ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು.
