ಕುರ್ನಾಡು: ಮಂಗಳೂರು ತಾಲೂಕಿನ ಕುರ್ನಾಡು ಗ್ರಾಮದ ವಿಶ್ವನಾಥ ಪೂಜಾರಿ (52) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಎ. 25 ರಂದು ಮಂಗಳವಾರ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಅವರು ಬೋಳಿಯಾರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾಗಿ , ಕುರ್ನಾಡು ಗ್ರಾಮದ ಬಿಜೆಪಿ ಅಧ್ಯಕ್ಷರಾಗಿ, ಹಲಾವಾರು ವರ್ಷಗಳಿಂದ ಕುರ್ನಾಡುವಿನಲ್ಲಿ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿದ್ದರು .25 vp vishvanath poojary

ಅವರ ಅಂತ್ಯಕ್ರೀಯೆಗೆ ಸಹಕಾರ ಸಂಘದ ಪ್ರಮುಖರಾದ ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ರಾಜರಾಂ ಭಟ್, ಮಂಗಳೂರು ವಿಧಾನ ಸಭಾ ಕ್ಷೇತ್ರದ  ಬಿಜೆಪಿ  ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ಬಿಜೆಪಿ ಉಪಾಧ್ಯಕ್ಷ ನವೀನ್ ಶೆಟ್ಟಿ, ಬಂಟ್ವಾಳ ತಾ. ಪಂ ಸದಸ್ಯ ನವೀನ್ ಕುಮಾರ್ ಪಾಗಲ್ಪಾಡಿ, ಕುರ್ನಾಡು ಗ್ರಾ.ಪಂ.ಅಧ್ಯಕ್ಷೆ ಶೈಲಜ ಹೇಮನಾಥ್, ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ ಹಾಗೂ ಹಲಾವಾರು ಪಕ್ಷದ ಪ್ರಮುಖರು ಅಂತ್ಯೆಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *