ಬಂಟ್ವಾಳ: ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅಧ್ಯಕ್ಷ ಬಿ.ತಮ್ಮಯ್ಯರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪಿಂಚಣಿದಾರರ ಸಂಘದ ಅಧ್ಯಕ್ಷ ಎನ್.ಸೀತಾರಾಮರವರು ಭಾಗವಹಿಸಿದ್ದರು.
ಸಭೆಯಲ್ಲಿ ವಯಸ್ಸು 75 ತುಂಬಿದ ಹಿರಿಯ ಸದಸ್ಯರಾದ ವಿ.ಮಹಾಲಿಂಗ ಭಟ್ಟ ಅಡ್ಯನಡ್ಕ, ಜಿ.ವೆಂಕಪ್ಪ ಅಸೈಗೋಳಿ, ಎ.ವಿ.ಲಕ್ಷ್ಮೀ ಮೊಂಟೆಪದವು, ಎಸ್.ಪುರುಷೋತ್ತಮ ಪೂಜಾರಿ. ಎ.ಲಿಂಗಪ್ಪ ಕೈಕುಂಜೆ, ಬಿ.ಕೆ.ನಾರಾಯಣರಾವ್ ಸಂಚಯಗಿರಿ, ಕೆ.ಶಾಮಾ ಬಾೈ ವಗ್ಗ, ಎಮ್.ಎಸ್.ದಿನಕರ್ ಕೈಕುಂಜೆ, ಈಶ್ವರ ನಾಯಕ್ ತೆಂಕಕಜೆಕ್ಕಾರು, ಕೆ.ಕಿಟ್ಟಣ್ಣ ರೈ ಕೊಡಂಗೆ, ಎಚ್.ಧರ್ಮಣ ಮೂಲ್ಯ ನರಿಂಗಾನ, ಪಿ.ಎ.ವಿಜಯನ್ ಕಾಞಂಗಾಡು, ಸೀತಾರಾಮ ನಾಯಕ್ ಕಂದೂರು ಸಜಿಪ, ಕೆ.ಚಂದ್ರಶೇಖರ ಶೆಟ್ಟಿ ಅಜ್ಜಿಬೆಟ್ಟು, ಅರ್ಕಕೀರ್ತಿ ಇಂದ್ರ ಸಿದ್ದಕಟ್ಟೆ ಇವರುಗಳನ್ನು ಮುಖ್ಯ ಅತಿಥಿಗಳು ಮತ್ತು ಅಧ್ಯಕ್ಷರು ಜಂಟಿಯಾಗಿ ಶಾಲು ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

2188
ಸನ್ಮಾನಿತರ ಪೈಕಿ ಮಹಾಲಿಂಗ ಭಟ್ಟ ಮತ್ತು ಅರ್ಕಕೀರ್ತಿ ಇಂದ್ರರು ಸಮಯೋಚಿತವಾಗಿ ಮಾತನಾಡಿ ಸಂಘಕ್ಕೆ ಶುಭ ಹಾರೈಸಿದರು. ಸನ್ಮಾನಿತರುಗಳ ವ್ಯಕ್ತಿ ಪರಿಚಯಗಳನ್ನು ರಾಘವನ್ ನಾಯಕ್, ಚಂದೂ ನಾೈಕ್, ಎಂ.ದಿನಕರ್, ಸುಂದರ ಮೂಲ್ಯ ಮತ್ತು ರಾಧಾಕೃಷ್ಣ ಶರ್ಮಾ ರವರು ಸಭೆಯಲ್ಲಿ ತಿಳಿಸಿದರು.
ಸಭಿಕರ ಪೈಕಿ ಅನಂತ ಪದ್ಮನಾಭ, ಆನಂದ ನಾೈಕ್, ಹಸನ್ ಸಾಹೇಬ್, ಜಯಂತ ಶೆಟ್ಟಿ, ಶಾಂತಾರಾಮ ಪ್ರಭು ಇವರುಗಳು ತಮ್ಮ ಅನಿಸಿಕೆಗಳನ್ನು ನೀಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ತಮ್ಮಯ್ಯ ರವರು ಸಂಘದ ಸದಸ್ಯರ ಪೂರ್u ಸಹಕಾರವನ್ನು ಸ್ಮರಿಸಿದರು.
ಉಪಾಧ್ಯಕ್ಷ ಎ.ಲಿಂಗಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ನೀಲೋಜಿರಾವ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಎ.ದಾಮೋದರ್ ವಂದಿಸಿದರು. ಶೇಶಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *