ಬಜ್ಪೆ: ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆ್ಜೆಗಳಿಗೋಸ್ಕರ ರೂಪಿಸಿದ ಸರಕಾರವೇ ನಮ್ಮ ಪ್ರಜಾ ಪ್ರಭುತ್ವ. ನಮ್ಮ ಸಂವಿಧಾನ ಜಾರಿಗೆ ಬಂದ ದಿನ ಜ.26 ಆಗಿರುವುದರಿಂದ ಈ ದಿನ ವಿಶೇಷವಾಗಿದೆ. ಮುಂದಿನ ಪೀಳಿಗೆಯಾದ ವಿದ್ಯಾಥರ್ಿಗಳು ಇದನ್ನೆಲ್ಲಾ ನೆನಪಲ್ಲಿಟ್ಟುಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಲಬೇಕು ಎಂದು ನಿವೃತ್ತ ಶಿಕ್ಷಕ
ನುಡಿದರು.
ಅವರು ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಮಳಲಿ ಶಾಲೆ ಇದರ ಜಂಟಿ ಆಶ್ರಯದಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
ಇಂದಿನ ವಿದ್ಯಾಥರ್ಿಗಳೇ ಮುಂದಿನ ಪ್ರಜೆಗಳು. ವಿದ್ಯಾಥರ್ಿಗಳು ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ಮೂಲಕ ದೇಶವನ್ನು ಮುನ್ನಡೆಸಲು ಕಲಿಯಬೇಕು. ನಮ್ಮ ಸಂವಿಧಾನವನ್ನು ರೂಪಿಸಲು ಹಲವಾರು ಮಂದಿ ಹಗಲು ಇರುಳೆನ್ನದೆ ಕೆಲಸ ಮಾಡಿದ್ದಾರೆ. ಸಂವಿಧಾನದಿಂದಲೇ ದೇಶ ಮುನ್ನಡೆಯುತ್ತದೆ. ಇವುಗಳನ್ನು ವಿದ್ಯಾಥರ್ಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾಥರ್ಿಗಳು ಮುಂದಿನ ಭವಿಷ್ಯದ ನಿಮರ್ಾತೃಗಳು. ಆದುದರಿಂದ ಪ್ರತಿಯೊಂದು ಸನ್ನಿವೇಶವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ದೇಶವನ್ನು ಉತ್ತಮಬಾಗಿ ಮುನ್ನಡೆಸುವ ಸಾಮಥ್ರ್ಯವನ್ನು ವಿದ್ಯಾಥರ್ಿಗಳು ಇಂದೇ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅವರೇ ಹಾರಿಸಲಾಯ್ತು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯವರು, ಸಹಶಿಕ್ಷಕರು ಮತ್ತಿತರರು ಹಾಜರಿದ್ದರು.
