ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿಕ್ಲಬ್ ಬಂಟ್ವಾಳ, ರೋಟರಿಕ್ಲಬ್ ಬಂಟ್ವಾಳ ಟೌನ್ ಇದರ ಆಶ್ರಯದಲ್ಲಿ ಕೆಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ಡಾ. ಎಂ.ವಿ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್, ಸರಕಾರಿ ವೆನ್ಲಾಖ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 90ನೇ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣ ಶಿಬಿರ ಮಂಗಳವಾರ ಬಿ.ಸಿ.ರೋಡಿನ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ರೋಟರಿ ಗವರ್ನರ್ ಅವರ ವಿಶೇಷ ಪ್ರತಿನಿಧಿ ಪ್ರಕಾಶ್ ಕಾರಂತ್ ಮಾತನಾಡಿ ಸೇವಾಂಜಲಿ ಸಂಸ್ಥೆಯ ಜೊತೆಗೂಡಿ ನಿರಂತರವಾಗಿ ರಕ್ತದಾನ ಶಿಬರವನ್ನು ನಡೆಸಿಕೊಂಡು ಬರುತ್ತಿದೆ. ಸುಮಾರು 60 ಯುನಿಟ್ ರಕ್ತವನ್ನು ಶಿಬಿರದ ಮೂಲಕ ಸಂಗ್ರಹಿಸಲಾಗಿದ್ದು 80 ರಿಂದ 90 ಯುನಿಟ್ ರಕ್ತ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಆರ್ಸಿಬಿ ಟೌನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಿಯೋಜಿತ ಅಧ್ಯಕ್ಷ ಸಂಜೀವ ಪೂಜಾರಿ, ಕೆ.ಎನ್ ಹೆಗ್ಡೆ, ಕರುಣಾಕರ ಶೆಟ್ಟಿ, ಉಮೇಶ್ ನರ್ಮಲ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಹಾಜರಿದ್ದರು.
