ಬಂಟ್ವಾಳ : ಮಂಗಳೂರು ಕೆಥೋಲಿಕ್ ಕೋ ಅಪರೇಟಿವ್ ಬ್ಯಾಂಕ್ ಬಿ.ಸಿ.ರೋಡು ಶಾಖೆಯಲ್ಲಿ ಕ್ಯಾಶಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾತ ಕಂಪ್ಯೂಟರ್ ನಲ್ಲಿ ಸೆಟ್ಟಿಂಗ್ಸ್ ನ್ನು ಬದಲಾಯಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ ವ್ಯವಹಾರವನ್ನು ಸ್ಥಗಿತಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬೊಂದೇಲ್ ನಿವಾಸಿ ವಿಜೇತ್ ಐವನ್ ಡಿ ಸೋಜ ಬಂಧಿತ ಆರೋಪಿಯಾಗಿದ್ದಾನೆ. ಉದ್ದೇಶ ಪೂರ್ವಕವಾಗಿ ಬ್ಯಾಂಕ್ ನ ಸಾಪ್ಟ್ ವೇರ್ ನ್ನು ಹಾಳುಗೆಡವಿದ ಬಗ್ಗೆ ಜನರಲ್ ಮೆನೇಜರ್ ಸುನೀಲ್ ಐವನ್ ಮೆನೇಜಸ್ ರವರು ನೀಡಿದ ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಎಸ್ಪಿ ಬೊರಸೆ ಯವರ ಮಾಗ೯ದಶ೯ನದಲ್ಲಿ ಬಂಟ್ವಾಳ ಉಪ ವಿಭಾಗ ಡಿವೈಎಸ್ಪಿ ರವೀಶ್ ರವರ ನಿದೇ೯ಶನದಂತೆ ಸಿ.ಪಿ.ಐ ಬಿ.ಕೆ.ಮಂಜಯ್ಯರವರ ಆರೋಪಿ ವಿಜೇತ್ ಐವನ್ ಡಿ’ಸೋಜಾ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
