ಕೈಕಂಬ: ಕುಪ್ಪೆಪದವು ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್(ರಿ) ಕುಪ್ಪೆಪದವು ಸೌಹಾರ್ದ ಸ್ಫೊಟ್ಸ್ ಕ್ಲಬ್(ರಿ)ಕುಪ್ಪೆಪದವು, ನ್ಯೂ ಫೆಂಡ್ಸ್(ರಿ)ಕುಪ್ಪೆಪದವು ಇದರ ಜಂಟಿ ಆಶ್ರಯದಲ್ಲಿ ಪದ್ಮಶ್ರೀ ಗ್ಯಾಸ್ ಏಜನ್ಸಿ ಮೂಡಬಿದ್ರೆ ಇವರ ಸಹಕಾರದೊಂದಿಗೆ ಹೊಸ ಗ್ಯಾಸ್‍ಗೆ ಸಂಪರ್ಕ ಹಾಗೂ ಮಾಹಿತಿ ಶಿಬಿರವು ಕುಪ್ಪೆಪದವು ಕಾವೇರಿ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕುಪ್ಪೆಪದವು ಗ್ರಾಮ.ಪಂಚಾಯತ್ ಅಧ್ಯಕ್ಷೆ ಲೀಲಾವತಿ ಆನಂದ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆದ ಅತಿಥಿಗಳು ಹೂವಿನ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

eac61c16-b21f-477f-af27-47feb463c580 ವೇದಿಕೆಯಲ್ಲಿ ಕುಪ್ಪೆಪದವು ಗ್ರಾ.ಪಂ.ಸದಸ್ಯ ಬಿ.ಎ.ಅಬೂಬಕ್ಕರ್ ಕಲ್ಲಾಡಿ, ನ್ಯೂ ಫ್ರೆಂಡ್ಸ್ ಕ್ಲಬ್ ಅಧಕ್ಷ ಎ,ಶರೀಫ್ ಬಿಕ್ಕೋಡ್, ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಅಬೂಬಕ್ಕರ್, ಸೌಹಾರ್ದ ಸ್ಪೋಟ್ಸ್ ಕ್ಲಬ್ ಗೌರವಾಧ್ಯಕ್ಷ ಕೆ.ಆದಂ, ಸೌಹಾರ್ದ ಸ್ಫೋಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ರೆಹಮಾನ್, ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ರಫೀಕ್ ಆಚಾರಿಜೋರ, ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್ ಕಾರ್ಯಧ್ಯಕ್ಷರು ಪುನೀತ್ ಕುಮಾರ್, ಸೌಹಾರ್ದ ಸ್ಫೋಟ್ಸ್ ಕ್ಲಬ್‍ನ ಅಬ್ದುಲ್ ಖಾದರ್, ನ್ಯೂ ಫ್ರೆಂಡ್ಸ್ ಕ್ಲಬ್‍ನ ಅಬ್ದುಲ್ ಅಝೀದ್, ಪದ್ಮಶ್ರೀ ಏಜನ್ಸಿಯ ಮ್ಯಾನೇಜರ್ ಅಲ್ಬರ್ಟ್ ಗ್ಯಾಸ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು, ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು. ಸೌಹಾರ್ದ ಸ್ಪೋಟ್ಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಹಕ್ ಕಾರ್ಯಕ್ರಮ ನಿರೂಪಿಸಿ ನ್ಯೂ ಫ್ರೆಂಡ್ಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಕೆ.ಎಮ್ ಅಬ್ದುಲ್ ಅಝೀಜ್ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *