ಉಡುಪಿ: ಯುವ ಜನಾಂಗ ದಾರಿ ತಪ್ಪಿಲ್ಲ ಬದಲಾಗಿ ಮಾರ್ಗದರ್ಶನದ ಕೊರತೆಯಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ ಅವರಿಗೆ ಉತ್ತಮ ಶಿಕ್ಷಣ ಮಾರ್ಗದರ್ಶನ ಮಾಡಿದಲ್ಲಿ ದೇಶದ ಅಭಿವೃಧಿ ಸಾದ್ಯ ಎಂದು ಯುವ ಸಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.ಅವರು ಮಾ.26ರಂದು ಮಣಿಪುರ ಗ್ರಾಮದ ಕೊಡಂಗಳ ಶ್ರೀ ರಾಮ ಪ್ರೆಂಡ್ಸ್ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.

16997855_1334431363247085_5921769389872256337_n(1)
ಮಕ್ಕಳಿಗೆ ಸರಿಯಾದ ಶಿಕ್ಷಣ ಮಾತ್ರವಲ್ಲದೆ ನೈತಿಕ ಶಿಕ್ಷಣದ ಅಗತ್ಯತೆಯಿದೆ ಹೀಗಾಗಿ ಮನೆಯಲ್ಲಿ ಪೋಷಕರು ಈ ಬಗ್ಗೆ ಕಾರ್ಯನಿರ್ವಹಿಸಬೇಕು ಎಂದರು.ಸಮಾಜದಲ್ಲಿ ಸಾಧನೆ ಮಾಡಲು ಉತ್ತಮ ರೀತಿಯ ಮನಸ್ಸಿನ ಅವಶ್ಯಕತೆಯಿದೆ ಎಂದ ಅವರು ಶ್ರೀ ರಾಮನ ಆದರ್ಶವನ್ನು ಈ ಸಂಘದವರು ತಮ್ಮ ಕಾರ್ಯಕ್ರಮದಲ್ಲಿ ತೊಡಗಿಸಿರುವುದು ಅಭಿನಂದನೀಯ ಎಂದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ತಾ.ಪಂ ಸದಸ್ಯೆ ಸಂದ್ಯಾ ಶೆಟ್ಟಿ ವಹಿಸಿ ಶುಭ ಹಾರೈಸಿದರು.

ಅತಿಥಿ, ಉದ್ಯಮಿ ಮತ್ತು ಸಮಾಜ ಸೇವಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ ಇರುವ ಜೀವನದಲ್ಲಿ ಏನಾದರೂ ಸಾಧನೆ ಮಾಡದಿದ್ದರೆ ನಾವು ನಮ್ಮ ಜನ್ಮದ ಋಣವನ್ನು ತೀರಿಸಲು ಅಸಾದ್ಯ ಎಂದರು.ಕಾರ್ಯಕ್ರಮದಲ್ಲಿ ಜಿ.ಫಂ ಸದಸ್ಯ ವಿಲ್ಸನ್ ರೋಡಿಗ್ರಸ್,ಮಣಿಪುರ ಗ್ರಾ.ಪಂ ಸದಸ್ಯರಾದ ಮಂಜುನಾಥ ಸರಳಾಯ, ಮಾಲತಿ ನಾಯ್ಕ,ಸುನಂದ ನಾಯ್ಕ,ಶಾಲಾ ಮುಖ್ಯ ಶಿಕ್ಷಕಿ ಲೀಡಿಯ ನಿರ್ಮಲಾ,ಸಂಘದ ಅದ್ಯಕ್ಷ ಪ್ರತಾಪ್ ಪೂಜಾರಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅದೇ ರೀತಿ ಕಲಾವಿದ ಮಹೇಶ ಮರ್ಣೆ ಮುಂತಾದವರನ್ನು ಸನ್ಮಾನಿಸಲಾಯಿತು.ನಂತರ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *