ಬಂಟ್ವಾಳ;ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ದೈವಸ್ಥಾನದ ಬಳಿರುವ ಗದ್ದೆಯ ಮೇಲ್ಬಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು ಸ್ಪಶ೯ಗೊಂಡು ಉಂಟಾದ ಬೆಂಕಿ ಗದ್ದೆಯಲ್ಲಿ ಬೆಳೆದಿದ್ದ ಮುಳಿಹುಲ್ಲುಗೆ ತಗುಲಿ ಬೆಂಕಿ ಹಬ್ಬಿದ ಘಟನೆ ಶನಿವಾರ ನಡೆದಿದೆ .ಸುದ್ದಿ ತಿಳಿದ ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.IMG-20170325-WA0004

ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ರಾಜೀವ್,ಸಿಬ್ಬಂದಿಗಳಾದ ಚಂದ್ರಕಾಂತ,ಲೋಕೇಶ್ ಭಂಡಾರಿ,ರೋಹಿತ್,ಜಗದೀಶ್,ಚಾಲಕ ರಾಜೇಶ್ ಶೆಟ್ಟಿ,ತಾಲೂಕು ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ,ವಿಜಯ ಅಮ್ಟಾಡಿ ಮೊದಲಾದವರು ಸಹಕರಿಸಿದರು.ಈಘಟನೆಯಿಂದ ಯಾವುದೇ ಹಾನಿ,ಅನಾಹುತ ಸಂಭವಿಸಿಲ್ಲ,ಬಂಟ್ವಾಳ ಮೆಸ್ಕಾಂ ಸಿಬ್ಬಂದಿಗಳು ಸಕಾಲದಲ್ಲಿ ಅಗಮಿಸಿ ತಂತಿಗಳನ್ನು ಸರಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *