ಬಂಟ್ವಾಳ: ಸಾಮಾಜಿಕ ಸಮಾನತೆ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ ಕರೆ ನೀಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಂಟ್ವಾಳ ಶಾಖೆ ಆಯೋಜಿಸಿದ ಅಂಬೇಡ್ಕರ್ ವಿಚಾರಯಾತ್ರೆಯ ಸಮೋರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತಾನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ತಹಸೀಲ್ದಾರ್ ಪುರಂದರ ಹೆಗ್ಡೆ ಸಂವಿಧಾನದ ಕುರಿತು ಮಾತನಾಡಿದರು. ಉದ್ಯಮಿ ಸೇಸಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಬಂಟ್ವಾಳ ನಗರ ಕಾರ್ಯದರ್ಶಿ ಚರಿತ್ ಕುಮಾರ್ ಸ್ವಾಗತಿಸಿದರು. ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಾಗ ಸಂಚಾಲಕ ಪ್ರಣಾಮ್ ರಾಜ್ ವಂದಿಸಿದರು. ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಮೇಧಾ ರಾಮಕುಂಜ ನಿರೂಪಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್, ಪ್ರಮುಖರಾದ ಅಶ್ವತ್ಥ್, ಪ್ರಮೋದ್, ಆಶಿಷ್, ಮನೀಷ್, ಶಿವಾನಿ ಉಪಸ್ಥಿತರಿದ್ದರು.ವಿಚಾರಯಾತ್ರೆ ಬಂಟ್ವಾಳ-ಬೈಪಾಸ್‍ನಿಂದ ಆರಂಭಗೊಂಡು ಬಂಟ್ವಾಳ ಪೇಟೆಯ ಮೂಲಕ ಸಾಗಿ, ಬಿ.ಸಿ.ರೋಡಿನ ನಾರಾಯಣ ಗುರು ಮಂದಿರದಲ್ಲಿ ಸಮಾಪನಗೊಂಡಿತು.
