ಮೂಡುಬಿದಿರೆ: ಒಳ್ಳೆಯ ಕಾವ್ಯವು ಸಮರ್ಪಣಾ ಭಾವವನ್ನು ತಿಳಿಸಿಕೊಡುತ್ತದೆ ಎಂದು ವಿದ್ವಾಂಸಕ, ಸಂಶೋಧಕ, ಹಂಪಿ ಕನ್ನಡ ವಿ.ವಿ.ಯಲ್ಲಿ ಜೈನ ಸಾಹಿತ್ಯ ಮತ್ತು ಸಂಸ್ಕøತಿ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎಸ್.ಪಿ.ಪದ್ಮಪ್ರಸಾದ್ ಹೇಳಿದರು.
ಮೂಡುಬಿದಿರೆಯ ಶ್ರೀ ಧವಲಾ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಜರಗಿದ ‘ಕನ್ನಡ ಕಾವ್ಯ ಪರಂಪರೆ’ ಕುರಿತು ಅವರು ಉಪನ್ಯಾಸ ನೀಡಿದರು.
ಮನುಷ್ಯ ಉದಾತ್ತನಾಗಲು ಪ್ರಯತ್ನಿಸಬೇಕು. ಉಸಿರು ಅಳಿದರೂ ಹೆಸರು ಉಳಿಯುವಂತೆ ವ್ಯಕ್ತಿತ್ವ ನಿರ್ಮಾಣವಾಗಲು ಕಾವ್ಯ, ಓದು ನಮ್ಮಲ್ಲಿ ಮೈಗೂಡಿಸಿಕೊಂಡಿರಬೇಕು ಎಂದರು.
ಪ್ರಾಚಾರ್ಯ ಪ್ರೊ. ಎಂ.ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್, ಉಪನ್ಯಾಸಕರಾದ ಕುಸುಮಾ, ಸುಧೀಶ್, ವಿದ್ಯಾರ್ಥಿ ಆನ್ಸಿಲ್ ಪ್ರಿನಿಸ್ಟನ್ ಸೆರಾವೊ ಕಾರ್ಯಕ್ರಮ ನಿರೂಪಿಸಿದರು. ಮಾಧವ ಸ್ವಾಗತಿಸಿ, ಸಂತೋಷ್ ನಾಯಕ್ ವಂದಿಸಿದರು.
