ಮೂಡುಬಿದಿರೆ: ನಾಲ್ಕು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಡುಬಿದಿರೆ ಬೆಳುವಾಯಿ ಮೂಲದ ಕಂಬಳ ಓಟಗಾರರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ, ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ದಿ.ಶೇಖರ್ ಆಚಾರ್ಯ ಅವರ ಪುತ್ರ ಬೆಳುವಾಯಿ ಹೇನಬೆಟ್ಟು ನಿವಾಸಿ ರತ್ನಾಕರ ಆಚಾರ್ಯ(35) ಮೃತ ದುರ್ದೈವಿ. ರತ್ನಾಕರ ಆಚಾರ್ಯ ಅವರು ಮೂಡುಬಿದಿರೆ ಪೇಟೆಯಲ್ಲಿರುವ ಅರಮನೆಬಾಗಿಲಿನಲ್ಲಿ ಬುಧವಾರ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ರತ್ನಾಕರ ಅವರ ಮೇಲೆ ಬಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿತ್ತು. ತಕ್ಷಣ ಅವರನ್ನು ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕೃಷಿಕರಾಗಿದ್ದ ರತ್ನಾಕರ ಆಚಾರ್ಯ ಕಳೆದ 12 ವರ್ಷಗಳಿಂದ ಕಂಬಳ ಓಟಗಾರರಾಗಿ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದರು. ಬೆಳುವಾಯಿ ಮೈನ್ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಾಲಿಬಾಲ್ ತರಬೇತಿ ನೀಡುತ್ತಿದ್ದು,
