ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ , ದ.ಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಳ್ತಿಲ ಗ್ರಾ.ಪಂ. ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಗ್ರಾ.ಪಂ.ಮಟ್ಟದ ಮಾಹಿತಿ ಶಿಬಿರ ಮತ್ತು ತಾಲೂಕು ಮತ್ತು ಜಿಲ್ಲಾ ಸ್ತ್ರೀ ಶಕ್ತಿ ಸದಸ್ಯರಿಗೆ ನಡೆದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಾಳ್ತಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾ.ಪಂ.ಸದಸ್ಯೆ ಲಕ್ಮೀಗೋಪಾಲಾಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಾಳ್ತಿಲ ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿವi, ಗ್ರಾ.ಪಂ.ಸದಸ್ಯರಾದ ವಸಂತ ಸಾಲಿಯಾನ್, ವೆಂಕಟರಾಯ ಪ್ರಭು, ವೀಣಾ, ಮೋಹನ್ ಪಿ.ಎಸ್,ಪುಷ್ಪವಾತಿ ಶೆಟ್ಟಿ, ರಜನಿ, ರೇಣುಕಾ, ಗುಲಾಬಿ,ಪುರುಷೋತ್ತಮ,ಜಯಶ್ರೀ, ಶಿವರಾಜ, ಬಾಳ್ತಿಲ ಗಾ.ಪಂ.ಪಿಡಿಒ ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ.ಜಿ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಉಮೇಶ್ ನಿರ್ಮಲ್, ಕಾಣೆಯಾದ ಮಕ್ಕಳ ಬ್ಯೂರೋದ ಸಂಯೋಜಕಿ ವಾಣಿ ನಾಯಕ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ಶಿವಾನಂದ ಉಪಸ್ಥಿತರಿದ್ದರು. ಇದೇ ಸಂದರ್ಭ ತಾಲೂಕು ಮತ್ತು ಜಿಲ್ಲಾ ಸ್ತ್ರೀ ಶಕ್ತಿ ಸದಸ್ಯರಿಗೆ ನಡೆದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ಸದಸ್ಯರಾದ ಶ್ಯಾಮಲಾ ಕುದ್ರೆಬೆಟ್ಟು, ಸುಲತಾ ಕುದ್ರೆಬೆಟ್ಟು, ಪದ್ಮಣಿ ದಾಸಕೋಡಿ, ಗ್ರಾ.ಪಂ.ಸದಸ್ಯೆ ವೀಣಾ ಮಯೂರ್ ಮತ್ತು ವೃಂದಾಕಿಶೋರಿ ಅವರನ್ನು ಸನ್ಮಾನಿಸಲಾಯಿತು. ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿ ವಂದಿಸಿದರು.
