ಅಳೇಕಲ:ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಶನ್ (ಎಸ್ ಎಸ್ ಎಫ್) ತೊಕ್ಕೊಟ್ಟು ಸೆಕ್ಟರ್ ಇದರ ಅದೀನದಲ್ಲಿ ಇರುವ ಎಸ್ ಎಸ್ ಎಫ್ ಅಳೇಕಲ ಶಾಖೆಯ ವತಿಯಿಂದ ರಿಫಾಯಿ ಶೈಖ್ ಸ್ಮರಣಾರ್ಥ ರಿಫಾಯಿ ಮೌಲಿದ್ ಮತ್ತು ಬಡ ಕುಟುಂಬಕ್ಕೆ ಅಕ್ಕಿ ವಿತರಣೆ ಕಾರ್ಯಕ್ರಮ ದಿನಾಂಕ 05/03/17 ರಂದು ಇಶಾ ನಮಾಝಿನ ಬಳಿಕ ಅಳೇಕಲದ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು ಎಸ್ ಅವರ ನೇತ್ರತ್ವದಲ್ಲಿ ರಿಫಾಯಿ ಮೌಲಿದ್ ಮಜ್ಲಿಸ್ ನಡೆಯಿತು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಮಾರ್ಚ್ 7 ರಂದು ಕುಂಪಲದ ವೈಟ್ ಹೌಸ್ನಲ್ಲಿ ಶಾಫೀ ಸಅದಿ ಉಸ್ತಾದರಿಗೆ ನಡೆಯುವ ಸನ್ಮಾನ ಸಮಾರಂಭದ ಪ್ರಚಾರ ಸಭೆಯು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾಧ್ಯಕ್ಷರಾದ ಫಾಝಿಲ್ ಅಳೇಕಲ ವಹಿಸಿದ್ದರು. ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಚೇರ್ಮ್ಯಾನ್ ಅಲ್ತಾಫ್ ಕುಂಪಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತೊಕ್ಕೊಟ್ಟು ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ, ತೊಕ್ಕೊಟ್ಟು ಸೆಕ್ಟರ್ ಕೋಶಾದಿಕಾರಿ ಜುನೈದ್ ಮದನಿ ನಗರ, ತೌಸೀಫ್ ಕುಂಪಲ, ತೊಕ್ಕೊಟ್ಟು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ, ಎಸ್ ಎಸ್ ಎಫ್ ಮಾರ್ಗತ್ತಲೆ ಶಾಖೆಯ ಅಧ್ಯಕ್ಷ ಸೈಫಾನ್, ಅಳೇಕಲ ಶಾಖೆಯ ಕೋಶಾದಿಕಾರಿ ಜಂಶೀರ್ ಅಳೇಕಲ ಸಹಿತ ಹಲವಾರು ಸುನ್ನಿ ಕಾರ್ಯಕರ್ತರು ಉಪಸ್ಥಿತರಿದ್ದರು. ಫಾಝಿಲ್ ಅಳೇಕಲದ ಸ್ವಾಗತಿಸಿ ಆರಿಫ್ ಧನ್ಯವಾದಗೈದರು.

