ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾರ್ಗದರ್ಶನದಲ್ಲಿ ಸುಭಾಷ್‍ನಗರದ ಪುಚ್ಚೇರಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ರಚಿಸಿರುವ ಓಂ ಸ್ತ್ರೀ ಶಕ್ತಿ ತಂಡವು ಶನಿವಾರ ಉದ್ಘಾಟನೆಗೊಂಡಿತು.

mbd_march4_4
ಪುರಸಭಾ ಸದಸ್ಯ ರತ್ನಾಕರ ದೇವಾಡಿಗ ಅವರು ಸ್ತ್ರೀ ಶಕ್ತಿ ತಂಡವನ್ನು ಉದ್ಘಾಟಿಸಿ ಮಾತನಾಡಿ ಸ್ತ್ರೀ ಶಕ್ತಿ ಎಂದರೆ ಅದು ದೇಶದ ಶಕ್ತಿ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವವರು. ಮನೆ, ಮಕ್ಕಳು ಜತೆಗೆ ಸಮಾಜವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವವರು. ಪ್ರತಿದಿನ ಎಲ್ಲರ ಅಭಿವೃದ್ಧಿಗಾಗಿ ದುಡಿಯುವವರು ಆದರಂತೆ ಸ್ತ್ರೀ ಶಕ್ತಿ ಸಂಘವೂ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಪುಚ್ಚೇರಿಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಸುರೆಂದ್ರ, ಓಂ ಸ್ತ್ರೀ ಶಕ್ತಿ ತಂಡದ ಅಧ್ಯಕ್ಷೆ ಪುಷ್ಪಾ, ಕಾರ್ಯದರ್ಶಿ ಸಂಧ್ಯಾ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವಿಜಯ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *