ಮಂಗಳೂರು ವಿ.ವಿ. ಪ್ರತಿನಿಧಿಸಿದ್ದ ಆಳ್ವಾಸ್ ದ್ವಿತೀಯ ರನ್ನರ್‍ಅಪ್ ಪ್ರಶಸ್ತಿ
ಮೂಡುಬಿದಿರೆ: ಪಂಜಾಬ್ ವಿಶ್ವವಿದ್ಯಾನಿಲಯ ಚಂಡೀಗಢ ಆಶ್ರಯದಲ್ಲಿ ಚಂಡೀಗಢದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಪ್ರಥಮ ಬಾರಿಗೆ ಪುರುಷರ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ 59ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿದ ಕಣ್ಣನ್ ವಿಜಯನ್ ಬೆಳ್ಳಿ ಪದಕ, 83ಕೆಜಿ ವಿಭಾಗದಲ್ಲಿ ಜಯದೀಪ್ ಕಂಚಿನ ಪದಕ, 93 ಕೆಜಿ ವಿಭಾಗದಲ್ಲಿ ಕೃಷ್ಣಕುಮಾರ್ ಬೆಳ್ಳಿ ಪದಕ, 105 ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಪಡೆಯುವುದರೊಂದಿಗೆ ದ್ವಿತೀಯ ರನ್ನರ್ ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮಹಿಳೆಯರ 63 ಕೆಜಿ ವಿಭಾಗದಲ್ಲಿ ಮರೀನಾದೇವಿ ಮತ್ತು 84 ಕೆಜಿ ವಿಭಾಗದಲ್ಲಿ ಉಷಾ ಬಿ.ಎನ್. ಚಿನ್ನದ ಪದಕ ಪಡೆದಿದ್ದು ಪದಕ ವಿಜೇತ ಎಲ್ಲಾ ಕ್ರೀಡಾಪಟುಗಳು ಆಳ್ವಾಸ್ ಕಾಲೇಜು ಮೂಡುಬಿದಿರೆ ವಿದ್ಯಾರ್ಥಿಗಳು. ಕರ್ನಾಟಕ ರಾಜ್ಯದಲ್ಲೇ ಮಂಗಳೂರು ವಿಶ್ವವಿದ್ಯಾನಿಲಯ ಪದಕ ವಿಜೇತ ಏಕೈಕ ವಿಶ್ವವಿದ್ಯಾನಿಲಯ ಎನ್ನುವುದು ವಿಶೇಷ.
