ಮೂಡುಬಿದಿರೆ: ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ ಹಾಗೂ ಇನ್ಫೆರಾ ಇದರ ಸಹಭಾಗಿತ್ವದಲ್ಲಿ ಅಂತರ್ಜಾಲದ ಕಡೆಗೆ ನಮ್ಮ ನಡಿಗೆ ಎಂಬ ವಿಷಯದಲ್ಲಿ ಒಂದು ದಿನದ ಮಾಹಿತಿ ಕಾರ್ಯಾಗಾರ ಮಾ.3ರಂದು ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ.
ಬೆಳುವಾಯಿ ಎಸ್ಎಂಪಿ ಹೈಸ್ಕೂಲಿನ ಶಿಕ್ಷಕ ವಲೇರಿಯನ್ ಮೊಂತೇರೋ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಆರ್. ಜೆ. ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ .
