ಮೂಡಬಿದಿರೆ: ಆಳ್ವಾಸ್ ಸ್ನಾತ್ತಕೋತ್ತರ ಕಾಲೇಜಿನ ಇಂಗ್ಲೀಷ್ ವಿಭಾಗವು ಮಂಗಳವಾರ, ಸುಂದರಿ ಆನಂದ ಆಳ್ವ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ಇಂಟರ್‍ಕಾಲೇಜ್ಯೇಟ್ ಕಾಂಪಿಟೇಷನ್ `ಶೋಧನಾ’-ಇನ್ ಸರ್ಚ ಆಫ್ ಸೆಲ್ಫನಲ್ಲಿ ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಬಾಟನಿ ವಿಭಾಗದ ಉಪನ್ಯಾಸಕ ಡಾ ಪಿ ಬಿ ಗೌಡ ತನ್ನ ಪಾಲಿಗೆ ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವವನೇ ಜೀವನದಲ್ಲಿ ಉನ್ನತ ಸ್ಥಾನಕ್ಕೆರಲು ಸಾದ್ಯ. ಅವಕಾಶ ಸಿಕ್ಕಿದಾಗ ಕೈ ಚೆಲ್ಲಿ,ನಂತರ ಪರಿತಪಿಸಿದರೆ ಪ್ರಯೋಜನವಿಲ್ಲ ಎಂದರು. ವಿದ್ಯಾರ್ಥಿದೆಸೆಯಲ್ಲಿ ಲಭಿಸುವ ವಿಫುಲ ಅವಕಾಶಗಳು, ಜೀವನದ ಮುಂದಿನ ಹಂತದಲ್ಲಿ ಲಭಿಸಲಾರದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಗಣೇಶ್ ಪ್ರಸಾದ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಐಶ್ವರ್ಯ ಕಾರ್ಯಕ್ರಮ ನಿರ್ವಹಿಸಿ, ಶೆರೋಲ್ ಸ್ವಾಗತಿಸಿ, ಆಪ್ರಿನ್ ವಂದಿಸಿದರು. ವಿಭಾಗದ ಉಪನ್ಯಾಸಕರುಗಳಾದ ಯಶಸ್ವಿನಿ, ದೀಪಿಕಾ ಮಲ್ಯ, ಅರ್ಥ ಪೆರ್ಲ ವಿವಿಧ ಸ್ಪರ್ಧೆಗಳನ್ನು ಸಂಯೋಜಿಸಿದರು.

mbd_march1_6
ಐದು ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಎಂ.ಸಿ.ಜೆ ವಿದ್ಯಾರ್ಥಿಗಳ ಸುಯೋಧನಾ ತಂಡ ಬಹುಮಾನವನ್ನು ತಮ್ಮದಾಗಿಸಿಕೊಂಡು ಚಾಂಪಿಯನ್ನರಾಗಿ ಮೂಡಿಬಂದರು. ಸಿನಿಸ್ಕೋಪ್‍ನಲ್ಲಿ ಪ್ರಥಮ ಎಂ.ಸಿ.ಜೆಯ ಅಶ್ವಿನಿ ಜೈನ್ ಪ್ರಥಮ, ಗ್ಯಾಲರಿ ಸ್ಪಿಕ್ಸ್‍ನಲ್ಲಿ ದ್ವಿತೀಯ ಎಂ.ಸಿ.ಜೆಯ ಸುಧಾಮ ಪೆರಾಜೆ ಪ್ರಥಮ, ಪ್ರಿನ್ಸ್ ಆಫ್ ಪರ್ಸಪ್ಶನ್‍ನಲ್ಲಿ ಪ್ರಥಮ ಎಂ.ಸಿ.ಜೆಯ ಅಶ್ವಿನಿ ಜೈನ್ ಪ್ರಥಮ, ಪೋಸ್ಟರ್ ಮೆಕಿಂಗನಲ್ಲಿ ಪ್ರಥಮ ಎಂ.ಸಿ.ಜೆಯ ಅಂಕಿತ್ ಹಾಗೂ ಪ್ರಪುಲ್ಲಾ ದ್ವಿತೀಯಾ, ಮೈಂಡ್ ಕ್ರೆಕರ್ಸ್ ನಲ್ಲಿ ದ್ವಿತೀಯ ಎಂ.ಸಿ.ಜೆಯ ಗೌರಿ ಜೋಷಿ ಹಾಗು ಪ್ರಥಮ ಎಂ.ಸಿ.ಜೆಯ ನರೇಂದ್ರ ದ್ವಿತೀಯ ಬಹುಮಾನಕ್ಕೆ ಪಾತ್ರರಾದರು. ಮಂಗಳೂರಿನ ಬೆಸೆಂಟ್ ಕಾಲೇಜಿನ ಅಶ್ವಥ್ಥಮಾ ತಂಡ ರನ್ನರ್ಸ್ ಆಪ್ ಪ್ರಶಸ್ತಿಗೆ ಭಾಜನವಾಯಿತು.

By suddi9

Leave a Reply

Your email address will not be published. Required fields are marked *