ಉಡುಪಿ:-ಜೇಸಿ ವಲಯದ ವಲಯಾದ್ಯಕ್ಷರ ಕನಸಿನ ಕಾರ್ಯಕ್ರಮ ಹಕ್ಕಿಗಳಿಗೆ ನೀರು ಮತ್ತು ಮೇವು ಒದಗಿಸುಚ ಸೇವ್ ಬರ್ಡ್ ಕ್ಯಾಂಪೆನ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು ನಲ್ಲಿ ಫೆ.27 ರಂದು ನಡೆಯಿತು.
ಕಾರ್ಯಕ್ರಮವನ್ನು ವಲಯಾದ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ಹಕ್ಕಿಗಳಿಗೆ ನೀರು ಮತ್ತು ಮೇವನ್ನು ಒದಗಿಸುವ ಮೂಲಕ ಅವುಗಳ ಸಂತತಿಯನ್ನು ಉಳಿಸುವ ಪ್ರಯತ್ನ ವಲಯದಲ್ಲಿ ನಡೆಯುತ್ತಿದೆ ಈ ಕಾರ್ಯಕ್ಕೆ ಸಾರ್ವಜನಿಕರೂ ಕೂಡ ಕೈಜೋಡಿಸಬೇಕು.ಶಾಲಾ ಕಾಲೆಜುಗಳಲ್ಲಿ ಕೂಡ ಈ ಕಾರ್ಯಕ್ರಮ ನಡೆಯುತ್ತಿದೆ ಇದರಿಂದ ಮಕ್ಕಳಿಗೂ ಕೂಡ ಹಕ್ಕಿಗಳ ಬಗ್ಗೆ ಅಭಿಮಾನ ಮೂಡುತ್ತಿದೆ ಎಂದರು.

ಕಾರ್ಯಕ್ರಮದ ಆಯೋಜಕರಾಧ ಜೇಸಿಐ ಕುಂದಾಪುರ ಮತ್ತು ಕುಂದಾಪುರ ಚರಿಶ್ಮಾ ಅದ್ಯಕ್ಷರಾದ ಅಕ್ಷತಾ ಗಿರೀಶ್ ಮತ್ತು ಗೀತಾಂಜಲಿ ನಾಯ್ಕ ಅದ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಲಯ ಕಾರ್ಯಕ್ರಮ ನಿರ್ದೇಶಕ ಅನಿಲ್ ಕುಮಾರ್,ವಲಯಾಧಿಕಾರಿ ಮಿಡಿಯಾ ಕವರೇಜ್ ರಾಘವೇಂದ್ರ ಪ್ರಭು ಕರ್ವಾಲು,ಶಾಲಾ ಮುಖ್ಯ ಶಿಕ್ಷಕ ಶೇಖರ ಮತ್ತು ಸದಸ್ಯರು ಭಾಗವಹಿಸಿದ್ದರು.
